ಕರ್ನಾಟಕ

karnataka

ನಾವ್‌ ಹುಟ್ಟಿಸಿದ್‌ ಮಕ್ಕಳನ್ನ ಕರ್ಕೊಂಡ್‌ ಹೋಗಿ ನಿಮ್ಮ ಮಕ್ಕಳು ಅಂದ್ರೆಲ್ಲ.. ನೀವೆಂಥಾ ಗಂಡ್ಸರಪ್ಪ ನೀವು..ಸಿ ಎಂ ಇಬ್ರಾಹಿಂ

By

Published : Dec 15, 2021, 7:27 PM IST

Updated : Dec 15, 2021, 7:46 PM IST

ಸಚಿವ ಭೈರತಿ ಬಸವರಾಜ್​ಗೆ ಕೋರ್ಟ್ ಆದೇಶ ಆಗಿದೆ. ಇದರಿಂದಾಗಿ ಅವರ ವಜಾ ಮಾಡಬೇಕೆಂದು ಆಗ್ರಹಿಸಿ ನಾವು ಧರಣಿ ನಡೆಸಿದ್ದೇವೆ. ನಾವು ‌ಸಿದ್ದರಾಮಯ್ಯ ಭೇಟಿ‌ ಮಾಡಿ‌ ಮುಂದಿನ‌ ತೀರ್ಮಾನ ಮಾಡುತ್ತೇವೆ. ನಾವು ಸುವರ್ಣಸೌಧದ ಗೇಟ್ ಬಳಿ ಹೋರಾಟ ಮಾಡಲು ಸಿದ್ಧ ಎಂದರು..

Narayanaswamy and CM Ibrahim
ನಾರಾಯಣಸ್ವಾಮಿ ಮತ್ತು ಸಿಎಂ ಇಬ್ರಾಹಿಂ

ಬೆಳಗಾವಿ :ನಾಳೆಯೂ ಸಹ ವಿಧಾನಪರಿಷತ್ತಿನಲ್ಲಿ ನಮ್ಮ ಧರಣಿ ಮುಂದುವರಿಯಲಿದೆ ಎಂದು ವಿಧಾನಪರಿಷತ್ ಕಾಂಗ್ರೆಸ್‌ನ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ ತಿಳಿಸಿದರು.

ವಿಧಾನ ಪರಿಷತ್ ಇಂದಿನ ಕಲಾಪ ಮುಂದೂಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾಳೆ ಪ್ರತಿಭಟನೆ ಮಾಡೇ ಮಾಡುತ್ತೇವೆ. ಭ್ರಷ್ಟ ಮಂತ್ರಿ ಸರ್ಕಾರದ ಒಳಗೆ ಇದ್ದರೆ ಎಲ್ಲರಿಗೂ ತೊಂದರೆ. ಕಾಂಗ್ರೆಸ್ ಪೀಠಕ್ಕೆ ಅಗೌರವ ತೋರಲ್ಲ. ಸಭಾಪತಿ ಚರ್ಚೆಗೆ ಅವಕಾಶ ಕೊಡಬೇಕು. ಮರುಪರಿಶೀಲನೆ ಮಾಡಲೇಬೇಕು. ಸಭಾಪತಿಗೆ ಬೇಸರ ಆಗಿದ್ದರೆ ಕ್ಷಮೆ‌ ಕೇಳುತ್ತೇವೆ ಎಂದರು.

ಸಚಿವ ಭೈರತಿ ಬಸವರಾಜ್​ಗೆ ಕೋರ್ಟ್ ಆದೇಶ ಆಗಿದೆ. ಇದರಿಂದಾಗಿ ಅವರ ವಜಾ ಮಾಡಬೇಕೆಂದು ಆಗ್ರಹಿಸಿ ನಾವು ಧರಣಿ ನಡೆಸಿದ್ದೇವೆ. ನಾವು ‌ಸಿದ್ದರಾಮಯ್ಯ ಭೇಟಿ‌ ಮಾಡಿ‌ ಮುಂದಿನ‌ ತೀರ್ಮಾನ ಮಾಡುತ್ತೇವೆ. ನಾವು ಸುವರ್ಣಸೌಧದ ಗೇಟ್ ಬಳಿ ಹೋರಾಟ ಮಾಡಲು ಸಿದ್ಧ ಎಂದರು.

ಬಳಿಕ ಕಾಂಗ್ರೆಸ್ ಸದಸ್ಯ ಸಿಎಂ ಇಬ್ರಾಹಿಂ ಮಾತನಾಡಿ, ನಮ್ಮನ್ನು ಹೊರಗೆ ಹಾಕುವ ಆದೇಶ ಸರಿನಾ, ಮಂತ್ರಿ ಆರೋಪದ ಬಗ್ಗೆ ಪ್ರಸ್ತಾಪ ಮಾಡಿದ್ದೇವೆ. ಚರ್ಚೆಗೆ ಅವಕಾಶ ಕೊಟ್ಟರೆ ಮುಗಿತು. ಕೋರ್ಟ್ ಆದೇಶ ಬಂದರೂ ಈ ಮಂತ್ರಿ ಮೇಲೆ ಯಾಕೆ ಕ್ರಮ ಇಲ್ಲ?. ನಾವು ಹುಟ್ಟಿಸಿರುವ ಮಕ್ಕಳಿಗೆ ನೀವು ಅಪ್ಪಂದಿರು ಅಂದ್ರಲ್ಲ. ನೀವ್ಯಾವ ಗಂಡಸರು. ಸಭಾಪತಿ ನಮಗೆ ಚರ್ಚೆ ಮಾಡಲು ಅವಕಾಶ ಬೇಕೇ ಬೇಕು. ನಾಳೆ ಮತ್ತೆ ಚರ್ಚೆ ಮಾಡಲು ಅವಕಾಶ ಕೇಳುತ್ತೇವೆ ಎಂದೇಳಿದರು.

ಇದನ್ನೂ ಓದಿ:ವಿಧಾನಪರಿಷತ್ತಿನಲ್ಲಿ ಸಭಾಪತಿ ಆದೇಶ ಉಲ್ಲಂಘಿಸಿ ಪ್ರತಿಭಟನೆ..ದಿನದ ಮಟ್ಟಿಗೆ 14 ಕಾಂಗ್ರೆಸ್​ ಸದಸ್ಯರ ಅಮಾನತು

Last Updated : Dec 15, 2021, 7:46 PM IST

ABOUT THE AUTHOR

...view details