ಬೆಳಗಾವಿ:ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ವಿವೇಕರಾವ್ ಪಾಟೀಲ್, ನಮ್ಮ ಸಾಹುಕಾರರು ಎಲ್ಲಿ ಹೋಗುತ್ತಾರೋ ಅಲ್ಲಿಗೆ ನಾವೂ ಹೋಗುತ್ತೇವೆ ಎಂದು ಹೇಳುವ ಮೂಲಕ ಆಪರೇಷನ್ ಕಮಲಕ್ಕೆ ಪುಷ್ಠಿ ನೀಡಿದ್ದಾರೆ.
ಸಾಹುಕಾರ್ ಹೋದಲ್ಲಿಗೆ ಹೋಗ್ತೀವಿ: ಮೈತ್ರಿ ನಡುಕ ಹೆಚ್ಚಿಸಿದ ವಿವೇಕರಾವ್ ಪಾಟೀಲ್! - undefined
ನಮ್ಮ ಸಾಹುಕಾರರು ಎಲ್ಲಿ ಹೋಗುತ್ತಾರೋ ಅಲ್ಲಿಗೆ ನಾವೂ ಹೋಗುತ್ತೇವೆ ಎಂದು ರಮೇಶ್ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ವಿವೇಕರಾವ್ ಪಾಟೀಲ್ ಹೇಳುವ ಮೂಲಕ ಅಚ್ಚರಿ ಮೈತ್ರಿಗೆ ನಡುಕ ಹೆಚ್ಚಿಸಿದ್ದಾರೆ.
ವಿವೇಕರಾವ್ ಪಾಟೀಲ್
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್, ರಮೇಶ್ ಜಾರಕಿಹೊಳಿ ಯಾವುದೇ ನಿರ್ಧಾರ ತಗೆದುಕೊಂಡರೂ ಅದಕ್ಕೆ ನಮ್ಮ ಸಮ್ಮತಿ ಇದೆ. ಅವರಿಗೆ ಒಳ್ಳೆಯ ಸ್ಥಾನಮಾನ ಸಿಕ್ಕರೆ ನಮಗೂ ಸಂತೋಷ. ಅವರ ಜೊತೆ ಈಗಾಗಲೇ ಅನೇಕ ಶಾಸಕರು ಇದ್ದಾರೆ. ನಮ್ಮ ಸಾಹುಕಾರರು ಎಲ್ಲಿ ಹೋಗುತ್ತಾರೋ ಅಲ್ಲಿಗೆ ನಾವೂ ಹೋಗುತ್ತೇವೆ ಎಂದು ತಿಳಿಸಿದರು.