ಕರ್ನಾಟಕ

karnataka

By

Published : Apr 8, 2021, 10:32 AM IST

Updated : Apr 8, 2021, 10:57 AM IST

ETV Bharat / state

ಹಠ ಹಿಡಿದರೆ ಬಿಗಿ ಕ್ರಮ: ಸಾರಿಗೆ ನೌಕರರಿಗೆ ಸಿಎಂ ಎಚ್ಚರಿಕೆ

ನಿನ್ನೆಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರತಿಕ್ರಿಯೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ
CM Yediyurappa

ಬೆಳಗಾವಿ:ಬೆಂಗಳೂರಿಗೆ ತೆರಳಿ ಸಾರಿಗೆ ನೌಕರರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. ಹಟ ಹಿಡಿದರೆ ಕಾನೂನು ರೀತಿಯಲ್ಲಿ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಬಿ.ಎಸ್‌.ಯಡಿಯೂರಪ್ಪ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ನಾನೇನು ಅವರನ್ನು ಮಾತುಕತೆಗೆ ಕರೆಯೋದಿಲ್ಲ. ಒಂಬತ್ತರಲ್ಲಿಎಂಟು ಭರವಸೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಅವರೇ ಮುಷ್ಕರ ವಾಪಸ್ ಪಡೆದು ಬಸ್​​​ಗಳನ್ನು ಓಡಿಸಲಿ ಎಂದರು.

ಇದನ್ನೂಓದಿ: 2 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: ಖಾಸಗಿ ಬಸ್ ಮೊರೆ ಹೋದ ಪ್ರಯಾಣಿಕರು

ಉಪಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮಾಡುವ ಟೀಕೆಗೆ ತಲೆ ಕೆಡಿಸಿಕೊಳ್ಳೊದಿಲ್ಲ.ಜನರು ನಮ್ಮ ಜೊತೆಗಿದ್ದಾರೆ. ನಾವು ಮಾಡಿರುವ ಕೆಲಸಕ್ಕೆ ಬೆಂಬಲ ಕೊಡುತ್ತಿದ್ದಾರೆ. ದಿ.ಸುರೇಶ್​ ಅಂಗಡಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂಓದಿ: ಸಾರಿಗೆ ಮುಷ್ಕರ ಹತ್ತಿಕ್ಕಲು ಸರ್ಕಾರದಿಂದ ಮತ್ತೊಂದು ಅಸ್ತ್ರ ಪ್ರಯೋಗ

ಬೆಳಗಾವಿ ಉಪಚುನಾವಣೆ ಪ್ರಚಾರಕ್ಕೆ ಮತ್ತೆ ಏ.14ಕ್ಕೆ ಬರುತ್ತೇನೆ. ಅಂದೂ ಕೂಡ ಎರಡು ವಿಧಾನಸಭೆ ಕ್ಷೇತ್ರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಪ್ರಚಾರ ಮಾಡುತ್ತೇನೆ‌. ಚುನಾವಣಾ ವಾತಾವರಣ ನಮ್ಮ ಪರವಾಗಿದ್ದು ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ ಎಂದರು.

Last Updated : Apr 8, 2021, 10:57 AM IST

ABOUT THE AUTHOR

...view details