ಕರ್ನಾಟಕ

karnataka

ETV Bharat / state

ಮಕ್ಕಳ ಹಿತದೃಷ್ಟಿಯಿಂದ ಎಸ್​ಇಪಿ ಜಾರಿ ಮಾಡೇ ಮಾಡುತ್ತೇವೆ: ಸಚಿವ ಮಧು ಬಂಗಾರಪ್ಪ - ರಾಷ್ಟ್ರೀಯ ಶಿಕ್ಷಣ ನೀತಿ

Madhu Bangarappa statement on SEP: ರಾಷ್ಟ್ರೀಯ ಶಿಕ್ಷಣ ನೀತಿಗಿಂತ ನಮ್ಮ ರಾಜ್ಯ ಶಿಕ್ಷಣ ನೀತಿ ಇನ್ನೂ ಉತ್ತಮವಾಗಿರಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

Minister Madhu Bangarappa
ಸಚಿವ ಮಧು ಬಂಗಾರಪ್ಪ

By ETV Bharat Karnataka Team

Published : Dec 7, 2023, 6:48 PM IST

Updated : Dec 7, 2023, 7:45 PM IST

ಸಚಿವ ಮಧು ಬಂಗಾರಪ್ಪ

ಬೆಳಗಾವಿ/ಬೆಂಗಳೂರು: ರಾಜ್ಯ ಶಿಕ್ಷಣ ನೀತಿಯನ್ನು (ಎಸ್​ಇಪಿ) ನಾವು ಜಾರಿ ಮಾಡೇ ಮಾಡುತ್ತೇವೆ. ಅದು ನಮ್ಮ ಬದ್ಧತೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಸುವರ್ಣಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿ ಚರ್ಚೆಗೆ ನಾವು ಸಿದ್ಧರಿದ್ದೇವೆ. ಇದಕ್ಕೆ ನಾವು ಸದನದಲ್ಲಿ ಉತ್ತರ ಕೊಡುತ್ತೇವೆ. ಎಸ್​ಇಪಿಯನ್ನು ನಾವು ಜಾರಿಗೆ ತರಲಿದ್ದೇವೆ. ಈಗಾಗಲೇ ಸಮಿತಿ ರಚಿಸಿ, ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಆಡಳಿತವಿದ್ದರೂ ಇವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್​ಇಪಿ) ಬೇರೆ ರಾಜ್ಯದಲ್ಲಿ ಏಕೆ ಜಾರಿ ಮಾಡಿಲ್ಲ. ಅದನ್ನು ಮಾಡಬೇಕಿತ್ತಲ್ಲ ಎಂದು ಪ್ರಶ್ನಿಸಿದರು.

ಇದರಲ್ಲಿರುವ ತಾಂತ್ರಿಕ ವಿವರಗಳನ್ನು ಅರ್ಥ ಮಾಡಿಕೊಳ್ಳಬೇಕು. ಎಸ್​ಇಪಿಯ ವಿಜ್ಞಾನ ಪಠ್ಯಗಳನ್ನು ಎನ್‌ಸಿಆರ್​ಟಿಯವರೇ ಕೊಡ್ತಾರೆ. ನಾವು ಪ್ರತ್ಯೇಕವಾಗಿ ಮಾಡಲ್ಲ. ಸಾಮಾಜಿಕ ಜವಾಬ್ದಾರಿ ಹಿನ್ನೆಲೆ ಸ್ಥಳೀಯ ಸಂಸ್ಕೃತಿಗೆ ಅನುನುಗುಣವಾಗಿ ಕೆಲ ಭಾಷೆ ನಿಯಂತ್ರಣದ ಬಗ್ಗೆ ತೀರ್ಮಾನ ಮಾಡುತ್ತೇವೆ. ಇವರ ಕೈಗೆ ಲಗಾಮು ಕೊಟ್ಟರೆ ಅವರು ಎತ್ತ ಬೇಕಾದರು ತಗೊಂಡು ಹೋಗ್ತಾರೆ. ಹಾಗಾಗಿ ಆ ರೀತಿ ಮಾಡಲು ಆಗಲ್ಲ. ರಾಜ್ಯ ಶಿಕ್ಷಣ ನೀತಿ ತುಂಬಾ ಚೆನ್ನಾಗಿರುತ್ತದೆ. ಸಿಬಿಎಸ್​ಸಿಯವರು ಈಗ ಎರಡು ಪರೀಕ್ಷೆ ಮಾಡಲು ಹೊರಟಿದ್ದಾರೆ. ಅವರು ಕೂಡ ನಮ್ಮನ್ನು ಅನುಸರಿಸುತ್ತಿದ್ದಾರೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಗಿಂತ ರಾಜ್ಯ ಶಿಕ್ಷಣ ನೀತಿ ಇನ್ನೂ ಉತ್ತಮವಾಗಿರಲಿದೆ.‌ ನಮ್ಮ ಸಂಸ್ಕೃತಿ, ವಾತಾವರಣಕ್ಕೆ ಅನುಗುಣವಾಗಿರಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್​ಇಪಿಯನ್ನು ಮಾಡಲಾಗುತ್ತಿದೆ. ಇದು ನಮ್ಮ ಪ್ರಣಾಳಿಕೆಯ ಬದ್ಧತೆಯಾಗಿದೆ. ಮತದಾರರ ಅಭಿಪ್ರಾಯಕ್ಕೆ ಗೌರವ ಕೊಡಬೇಕಲ್ವಾ?. ಇದನ್ನು ಸೂಕ್ಷ್ಮತೆಯಿಂದ ಪರಿಗಣಿಸುತ್ತೇವೆ.‌ ಮಕ್ಕಳ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆಯೇ ಹೊರತು ಬೇರೆಯವರ ಹಿತದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಸಚಿವರು ಹೇಳಿದರು.

ಇದನ್ನೂ ಓದಿ:ಹಣವಿಲ್ಲದೇ ಕಾಂಗ್ರೆಸ್ ಸರ್ಕಾರ ಪಾಪರ್ ಆಗಿದೆ: ಆರ್ ಅಶೋಕ್​ ವಾಗ್ದಾಳಿ

Last Updated : Dec 7, 2023, 7:45 PM IST

ABOUT THE AUTHOR

...view details