ಅಥಣಿ:ಅನರ್ಹ ಶಾಸಕ ರಮೇಶ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಇಂದು ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಮಹೇಶ್ ಕುಮ್ಮಟ್ಟಳ್ಳಿ, ಸಮ್ಮಿಶ್ರ ಸರ್ಕಾರದಲ್ಲಿ ಅಥಣಿ ಭಾಗಕ್ಕೆ ಅನ್ಯಾಯವನ್ನು ಖಂಡಿಸಿ ನಾನು ರಾಜಿನಾಮೆಗೆ ಸಿದ್ಧನಾದೆ ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದಾರೆ. ಈ ವಿಷಯ ಸದ್ಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದರಿಂದ ಚರ್ಚೆ ಬೇಡ, ಅಥಣಿ ಭಾಗದಲ್ಲಿ ನೆರೆ ಸಂತ್ರಸ್ತರಿಗೆ ಏನು ಪರಿಹಾರ ದೊರಕಬೇಕಾಗಿದೆ ಅದನ್ನು ಖಂಡಿತವಾಗಿಯೂ ದೊರಕಿಸಿಕೊಡಲಾಗುವುದು ಎಂದರು.