ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ನೂರು ಮಂದಿ ಕೊರೊನಾ ಶಂಕಿತರ ಮೇಲೆ ನಿಗಾ: ಸಿಎಂ ಯಡಿಯೂರಪ್ಪ - ಕೊರೊನಾ ವೈರಸ್​ ಮುಂಜಾಗ್ರತಾ ಕ್ರಮ

ಕೊರೊನಾ ಭೀತಿ ಹೆಚ್ಚಾಗಿದೆ. ರಾಜ್ಯದಲ್ಲಿ ಸುಮಾರು 100 ಜನ ಶಂಕಿತ ಕೊರೊನಾ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 6 ಜನರಲ್ಲಿ ವೈರಸ್​ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ
Yeddyurappa

By

Published : Mar 15, 2020, 12:26 PM IST

ಬೆಳಗಾವಿ:ಆರು ಜನರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿ ನೂರು ಜನರು ಕೊರೊನಾ ಶಂಕಿತರಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕೃತ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ 100 ಮಂದಿ ಕೊರೊನಾ ಶಂಕಿತರ ಮೇಲೆ ತೀವ್ರ ನಿಗಾ: ಸಿಎಂ ಮಾಹಿತಿ

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಶಂಕಿತರ ಮೇಲೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನಿಗಾ ಇಟ್ಟಿದೆ. ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಶಾಲಾ, ಕಾಲೇಜುಗಳಿಗೆ ವಾರದವರೆಗೆ ರಜೆ ನೀಡಲಾಗಿದೆ. ಕೊರೊನಾ ನಿಯಂತ್ರಿಸಲು ಸರ್ಕಾರ ಸನ್ನದ್ಧವಾಗಿದೆ ಎಂದರು.

ನಾಡೋಜ ಪಾಟೀಲ ಪುಟ್ಟಪ್ಪ ಅವರ ಆರೋಗ್ಯ ವಿಚಾರಿಸಲು ಹುಬ್ಬಳ್ಳಿಗೆ ತೆರಳಬೇಕಿದೆ. ನನ್ನ ಹುಬ್ಬಳ್ಳಿ ಪ್ರವಾಸ ಮೊದಲೇ ನಿಗದಿಯಾಗಿತ್ತು. ಈ ಭಾಗಕ್ಕೆ‌ ಬರುತ್ತಿರುವ ಕಾರಣ ಕವಟಗಿಮಠ ಪುತ್ರಿಯ‌ ಮದುವೆ ಸಮಾರಂಭದಲ್ಲಿ ಭಾಗಿಯಾಗುತ್ತಿರುವೆ ಎಂದು ಕೊರೊನಾ ಎಮರ್ಜೆನ್ಸಿ ಮಧ್ಯೆ ಮದುವೆ ಸಮಾರಂಭದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಿಎಂ ಸ್ಪಷ್ಟನೆ ನೀಡಿದರು.

ABOUT THE AUTHOR

...view details