ಬೆಳಗಾವಿ: ಸರ್ಕಾರ ರಚಿಸುವ, ಉರುಳಿಸುವ ಸಾಮರ್ಥ್ಯ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳಿಗಿದೆ. ಹೀಗಾಗಿ ನಾವು ಎಂದೂ ಡಿಸಿಎಂ ಸ್ಥಾನಕ್ಕೆ ಆಸೆ ಪಡಲ್ಲ. ಆದರೆ, ಮುಖ್ಯಮಂತ್ರಿಯೇ ಆಗ್ತೀವಿ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ನಾವ್ ಬೆಳಗಾವಿ ಮಂದಿ, ಆದರೆ ಮುಖ್ಯಮಂತ್ರಿಯೇ ಆಗ್ತೀವಿ.. ಡಾ. ಪ್ರಭಾಕರ ಕೋರೆ - Karnataka political crisis
ಮೊನ್ನೆಯ ಮೈತ್ರಿ ಸರ್ಕಾರವಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ನಮ್ಮ ಪ್ರಭಾವ ಇದೆ. ಇಷ್ಟಿದ್ದರೂ ಬೆಳಗಾವಿಯ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ರಾಜಕಾರಣಿಗಳಿಗೆ ಸರ್ಕಾರ ರಚಿಸುವುದೂ ಗೊತ್ತು. ಉರುಳಿಸುವುದೂ ಗೊತ್ತಿದೆ. ಮೊನ್ನೆಯ ಮೈತ್ರಿ ಸರ್ಕಾರವಷ್ಟೇ ಏಕೆ ನಿಜಲಿಂಗಪ್ಪ ಕಾಲದಿಂದಲೂ ರಾಜ್ಯ ರಾಜಕಾರಣದಲ್ಲಿ ನಮ್ಮ ಪ್ರಭಾವ ಇದೆ. ಇಷ್ಟಿದ್ದರೂ ಬೆಳಗಾವಿಯ ಯಾರೊಬ್ಬರೂ ಈವರೆಗೆ ಸಿಎಂ ಆಗಿಲ್ಲ ಎಂಬುವುದೇ ಬೇಸರ ಎಂದರು.
ಹಾಗಂತಾ ನಾವು ಡಿಸಿಎಂ ಸ್ಥಾನಕ್ಕೆ ತೃಪ್ತಿಪಡುವವರಲ್ಲ. ಆದರೆ, ಯಾರಾದರೊಬ್ಬರು ಜಿಲ್ಲೆಯವರೇ ಸಿಎಂ ಆಗುತ್ತೇವೆ ಎಂದರು. ರಾಜ್ಯದ ಜನರ ನಿರೀಕ್ಷೆಯಂತೆ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಜಿಲ್ಲೆಗೆ ನಾಲ್ಕು ಸಚಿವ ಸ್ಥಾನ ಕೊಡಬೇಕು ಎಂಬ ಬೇಡಿಕೆ ಇದೆ. ಅದಕ್ಕೂ ಹೆಚ್ಚು ನಮಗೆ ಸಚಿವ ಸ್ಥಾನ ಸಿಕ್ಕರೆ ಖುಷಿ ಎಂದು ಹೇಳಿದರು.