ಚಿಕ್ಕೋಡಿ :ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆಯಿಂದ ವಾರ್ಡಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ರೆ, ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಅಲ್ಲಿನ ಸ್ಥಳೀಯರು ಎದುರು ನೋಡುವ ಪರಿಸ್ಥಿತಿ ಎದುರಾಗಿದೆ.
’ನಮಗೆ ನೀರಿಲ್ಲ ನೀರು ಕೊಡ್ರಯ್ಯಾ’...ಅಥಣಿ ಪಟ್ಟಣದಲ್ಲಿ ಮೂರುದಿನಕ್ಕೊಮ್ಮೆ ನೀರು.. - belagavi
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಪುರಸಭೆಯಿಂದ ವಾರ್ಡ್ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ರೆ ಮೂರು ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಅಲ್ಲಿನ ಸ್ಥಳೀಯರು ಎದುರು ನೋಡುವ ಪರಿಸ್ಥಿತಿ ಎದುರಾಗಿದೆ.

.ಅಥಣಿ ಪಟ್ಟಣದಲ್ಲಿ ಮೂರುದಿನಕ್ಕೊಮ್ಮೆ ನೀರು..
.ಅಥಣಿ ಪಟ್ಟಣದಲ್ಲಿ ಮೂರುದಿನಕ್ಕೊಮ್ಮೆ ನೀರು..
ಇನ್ನು ಜೂನ್ ಮೊದಲ ವಾರದಿಂದ ಶಾಲಾ ಕಾಲೇಜು ಪ್ರಾರಂಭವಾಗಿದ್ದು ಮಕ್ಕಳನ್ನು ರೆಡಿಮಾಡಿ ಶಾಲೆಗಳಿಗೆ ಕಳುಹಿಸಲು ತಾಯಂದಿರು ಹೈರಾಣಾಗುತ್ತಿದ್ದಾರೆ. ಅಥಣಿ ಪುರಸಭೆ ಮೂರು ದಿನಕೊಮ್ಮೆ ನೀರು ಪೂರೈಸುತ್ತಿರುವುದರಿಂದ ಆ ನೀರು ಜನರಿಗೆ ಸಾಕಾಗುತ್ತಿಲ್ಲ. ಇದರಿಂದ ಮಹಿಳೆಯರು ನೀರಿಗಾಗಿ ಐದಾರು ಕಿಲೋಮೀಟರ್ ಹೋಗಿ ನೀರು ತರುವ ಪರಿಸ್ಥಿತಿ ಎದುರಾಗಿದೆ.
ಇನ್ನು ಇಲ್ಲಿನ ಜನರ ನೀರಿನ ಸಮಸ್ಯೆಯನ್ನು ಆದಷ್ಟು ಬೇಗ ಸರಿ ಪಡಿಸಬೇಕೆಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.