ಕರ್ನಾಟಕ

karnataka

ETV Bharat / state

ನಿಷ್ಕ್ರಿಯವಾಗಿದ್ದ ಬೋರ್​ವೆಲ್​ನಲ್ಲಿ ಚಿಮ್ಮುತ್ತಿದೆ ಒರತೆ... ಮಳೆಗಾಲದಲ್ಲೂ ರೈತರಿಗೆ ತಪ್ಪದ ಸಂಕಷ್ಟ - ಬೇಸಿಗೆಯಲ್ಲಿ ನಿಷ್ಕ್ರಿಯವಾಗಿದ್ದ ಬೋರ್​ವೆಲ್​ನಲ್ಲಿ ಇದೀಗ ಚಿಮ್ಮುತ್ತಿದೆ ನೀರು

ರೈತನ ಹೊಲದಲ್ಲಿ ಬೇಸಿಗೆಯಲ್ಲಿ ಕೊರಸಿದ್ದ ಬೋರವೆಲ್ ನಿಷ್ಕ್ರಿಯವಾಗಿತ್ತು, ಸದ್ಯ ತಾಲೂಕಿನಲ್ಲಿ ಮಹಾ ಮಳೆಗೆ ಬೋರವೆಲ್ ನಲ್ಲಿ ಯಾವುದೇ ಮೋಟಾರ್ ಸಹಾಯ ಇಲ್ಲದೆ ತನ್ನಿಂತಾನೆ ಬೋರವೆಲ್​ನಲ್ಲಿ ನೀರು ಚಿಮ್ಮುತ್ತಿದೆ.

ಬೋರ್​ವೆಲ್​

By

Published : Oct 26, 2019, 5:39 PM IST

ಅಥಣಿ :ರೈತನ ಹೊಲದಲ್ಲಿ ಕೃಷಿಗಾಗಿ ಬೇಸಿಗೆಯಲ್ಲಿ ನೀರಿಗಾಗಿ ಕೊರೆಸಿದ್ದ ಬೋರವೆಲ್​ನಲ್ಲಿ ನೀರು ಬಂದಿರಲಿಲ್ಲ ಆದರೆ ಇಂದು ಇದ್ದಕ್ಕಿದ್ದಂತೆ ನೀರು ಚಿಮ್ಮಿ ಹರಿಯುತ್ತಿದೆ.

ಬೋರ್​ವೆಲ್​ನಲ್ಲಿ ಚಿಮ್ಮುತ್ತಿರುವ ನೀರು

ಹೌದು..ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸ್ವಪ್ನಿಲ್ ಪಾಟೀಲ್ ರೈತನ ಹೊಲದಲ್ಲಿ ಬೇಸಿಗೆಯಲ್ಲಿ ಕೊರಸಿದ್ದ ಬೋರವೆಲ್ ನಿಷ್ಕ್ರಿಯವಾಗಿತ್ತು, ಸದ್ಯ ತಾಲೂಕಿನಲ್ಲಿ ಮಹಾ ಮಳೆಗೆ ಬೋರ್​ವೆಲ್ ನಲ್ಲಿ ಯಾವುದೇ ಮೋಟಾರ್ ಸಹಾಯ ಇಲ್ಲದೆ ತನ್ನಿಂತಾನೆ ನೀರು ಚಿಮ್ಮುತ್ತಿದ್ದು, ತಾಲೂಕಿನ ಕೆಲವು ಗ್ರಾಮದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿವೆ.

ಸರಿ ಸುಮಾರು 7ಇಂಚಿನ ಕಿರಸಿಂಗ್ ಪೈಪ್ ಮುಖಾಂತರ ನೀರು ಚಿಮ್ಮುತ್ತಿದೆ. ಬೇಸಿಗೆಯಲ್ಲಿ ಒಂದು ಹನಿ ನೀರು ಇಲ್ಲದೆ ರೈತ ಪರದಾಡುವಂತಾಗಿದ್ದರೆ, ಮಳೆಗಾಲದಲ್ಲಿ ಈ ರೀತಿ ನೀರಿನಿಂದ ರೈತರಿಗೆ ಸಂಕಷ್ಟ ತಂದೊಡ್ಡಿದೆ.

ABOUT THE AUTHOR

...view details