ಕರ್ನಾಟಕ

karnataka

ETV Bharat / state

72 ಗಂಟೆ ಊಟವಿಲ್ಲದೆ ಪರದಾಡಿದ ಅಲೆಮಾರಿಗಳು... ಹಸಿವು ನೀಗಿಸಿ ಮಾನವೀಯತೆ ಮೆರೆದ ಬೆಳಗಾವಿ ಜನ - wanderer community people

ಲಾಕ್‌ಡೌನ್ ಘೋಷಿಸುವುದರಿಂದ ನಗರದಲ್ಲಿನ ಎಲ್ಲ ಹೋಟೆಲ್​ಗಳು ಬಂದ್ ಆಗಿವೆ. ಹಾಗಾಗಿ ಬಿಹಾರ, ರಾಜಾಸ್ಥಾನದ 75ಕ್ಕೂ ಹೆಚ್ಚಿನ ಕುಟುಂಬಗಳು ಸುಮಾರು 72 ಗಂಟೆಗಳಿಂದ ಊಟವಿಲ್ಲದೇ ಉಪವಾಸವಿದ್ದರು. ಅವರ ಪರಿಸ್ಥಿತಿ ಅರಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.

lockdown
ಅಲೆಮಾರಿಗಳು

By

Published : Mar 24, 2020, 7:39 PM IST

ಬೆಳಗಾವಿ: ಇಲ್ಲಿನ ಅಜಮ್ ನಗರದ ಕಿಲ್ಲಾ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿರುವ ಅಲೆಮಾರಿಗಳು ತಿನ್ನಲು ಊಟ ಸಹ ಇಲ್ಲದೇ ಪರದಾಡುವಂತಾಗಿದೆ.

72 ಗಂಟೆಗಳಿಂದ ಊಟವಿಲ್ಲದೇ ಉಪವಾಸವಿದ್ದ ಅಲೆಮಾರಿಗಳು

ಜಿಲ್ಲೆಯಲ್ಲಿ ಲಾಕ್‌ಡೌನ್ ಘೋಷಿಸುವುದರಿಂದ ನಗರದಲ್ಲಿನ ಎಲ್ಲ ಹೋಟೆಲ್​ಗಳು ಬಂದ್ ಆಗಿರುವ ಪರಿಣಾಮ ಬಿಹಾರ್​, ರಾಜಾಸ್ಥಾನದ 75ಕ್ಕೂ ಹೆಚ್ಚಿನ ಕುಟುಂಬಗಳು ಸುಮಾರು 72 ಗಂಟೆಗಳಿಂದ ಊಟ ಮಾಡಿರಲಿಲ್ಲ. ಅವರ ಈ ದಯನೀಯ ಪರಿಸ್ಥಿತಿ ಬಗ್ಗೆ ತಿಳಿದ ನಗರದ ವಿವಿಧ ಸಂಘಟನೆಯ‌ ಪದಾಧಿಕಾರಿಗಳು ಹಾಗೂ‌ ಸಾರ್ವಜನಿಕರು‌ ಅಲೆಮಾರಿ‌ ಜನಾಂಗದ ಕುಟುಂಬದ ಸಹಾಯಕ್ಕೆ ಧಾವಿಸಿದ್ದಾರೆ. ತಮ್ಮ ಮನೆಗಳಲ್ಲಿಯೇ ಅಡುಗೆ ಮಾಡಿಕೊಂಡು ಎಲ್ಲ ಕುಟುಂಗಳಿಗೆ ಊಟ, ಬಿಸ್ಕತ್ತು ಸೇರಿದಂತೆ ‌ಅಗತ್ಯ‌ ವಸ್ತುಗಳನ್ನು ಹಂಚಿ ಮಾನವೀಯತೆ ಮೆರೆದಿದ್ದಾರೆ.

ಈ ಸಹಾಯ ಹಸಿವಿನಿಂದ ಕಂಗಾಲಾಗಿದ್ದ ಅಲೆಮಾರಿ ಜನಾಂಗದ ಮಕ್ಕಳು, ಮಹಿಳೆಯರು ಸೇರಿದಂತೆ 75 ಕುಟುಂಬಗಳಲ್ಲಿದ್ದವರಿಗೆ ಮರು ಜೀವ ಬಂದಂತಾಗಿದೆ. ತಮಗೆ ಸಹಾಯ ಮಾಡಿದವರಿಗೆ ಈ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ABOUT THE AUTHOR

...view details