ಕರ್ನಾಟಕ

karnataka

ETV Bharat / state

ಸೃಜನಶೀಲತೆ-ಕೌಶಲ್ಯತೆಯಿಂದ ವಿಫುಲ ಉದ್ಯೋಗಾವಕಾಶ: ಪ್ರೊ. ಅಗರವಾಲ್​ - ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಸೃಜನಶೀಲತೆಗೆ ಹೆಚ್ಚಿನ ಮಹತ್ವ ಇರುವುದರಿಂದ ಕಲೆ, ವಿಜ್ಞಾನ, ವಾಣಿಜ್ಯ ಅಥವಾ ಔದ್ಯೋಗಿಕ ಹೀಗೆ ಯಾವುದೇ ಕ್ಷೇತ್ರವಿದ್ದರೂ ಹೊಸತನಕ್ಕೆ ತೆರೆದುಕೊಳ್ಳಬೇಕಿದೆ. ಅವಕಾಶಗಳನ್ನು ಪಡೆಯಬೇಕಾದರೆ ಹೊಸ ಹೊಸ ಕೌಶಲ್ಯಗಳ ಅಗತ್ಯವಿರುತ್ತದೆ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ ಅಧ್ಯಕ್ಷ ಪ್ರೊ. ಕೆ.ಕೆ. ಅಗರವಾಲ್ ಸಲಹೆ ನೀಡಿದರು.

belguam
ಸೃಜನಶೀಲತೆ-ಕೌಶಲ್ಯತೆಯಿಂದ ವಿಫುಲ ಉದ್ಯೋಗಾವಕಾಶ: ಪ್ರೊ.ಅಗರವಾಲ್​

By

Published : Feb 9, 2020, 7:46 AM IST

ಬೆಳಗಾವಿ:ಇಂದಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಸೃಜನಶೀಲತೆಗೆ ಹೆಚ್ಚಿನ ಮಹತ್ವ ಇರುವುದರಿಂದ ಕಲೆ, ವಿಜ್ಞಾನ, ವಾಣಿಜ್ಯ ಅಥವಾ ಔದ್ಯೋಗಿಕ ಹೀಗೆ ಯಾವುದೇ ಕ್ಷೇತ್ರವಿದ್ದರೂ ಹೊಸತನಕ್ಕೆ ತೆರೆದುಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್​ಬಿಎ) ಅಧ್ಯಕ್ಷ ಪ್ರೊ. ಕೆ.ಕೆ. ಅಗರವಾಲ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನಸಂಗಮ" ಆವರಣದಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶನಿವಾರ ನಡೆದ 19ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಭವಿಷ್ಯವು ಇಂಜಿನಿಯರ್​ಗಳು ಹಾಗೂ ತಂತ್ರಜ್ಞರ ಕೈಯಲ್ಲಿರುವುದರಿಂದ ಸದೃಢ ರಾಷ್ಟ್ರ ನಿರ್ಮಾಣದ ಜವಾಬ್ದಾರಿ ಹೊಸ ಪದವೀಧರರ ಮೇಲಿದೆ. ಪದವಿಯ ಜತೆಗೆ ವೃತ್ತಿನೈಪುಣ್ಯತೆ, ಬದ್ಧತೆಯ ಮೂಲಕ ಸಮಾಜದ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಕೃತಕ ಬುದ್ಧಿಮತ್ತೆಯ ಕುರಿತು ಬಹುಚರ್ಚೆ ನಡೆಯುತ್ತಿರುವ ಈ ದಿನಗಳಲ್ಲಿ ನಮ್ಮ ಸ್ಥಾನಮಾನವನ್ನು ಮೌಲ್ಯಮಾಪನ ಮಾಡಿಕೊಳ್ಳಲು ಮೆದುಳು ಹೊಂದಿರುವ ಯಂತ್ರದ ಜತೆಗೆ ಹೋಲಿಕೆ ಮಾಡಿಕೊಳ್ಳುವಂತಾಗಿದೆ. ಅಂತಾರಾಷ್ಟ್ರೀಯ ಸಂಶೋಧನೆ ಪ್ರಕಾರ ಮುಂಬರುವ ದಿನಗಳಲ್ಲಿ ಕೃತಕ‌ ಬುದ್ಧಿಮತ್ತೆಯ ಬದಲಾಗಿ ಭಾವನಾತ್ಮಕ ಬುದ್ಧಿಮತ್ತೆ(ಎಮೋಷನಲ್ ಇಂಟಿಲೆಜೆನ್ಸ್)ಗೆ ಬೇಡಿಕೆ ಹೆಚ್ಚಾಗಲಿದೆ. ಭಾರತದಲ್ಲಿ ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಭಾವನಾತ್ಮಕ ಬುದ್ಧಿಮತ್ತೆಯ ಕೌಶಲ್ಯಕ್ಕೆ 8.3 ಪಟ್ಟು ಬೇಡಿಕೆ ಹೆಚ್ಚಾಗಲಿದೆ. ಉದ್ಯೋಗಾವಕಾಶಗಳು ಯಾವಾಗಲೂ ಕಡಿಮೆ ಆಗುವುದಿಲ್ಲ. ಆದರೆ ಅವಕಾಶಗಳನ್ನು ಪಡೆಯಬೇಕಾದರೆ ಹೊಸ ಹೊಸ ಕೌಶಲ್ಯಗಳ ಅಗತ್ಯವಿರುತ್ತದೆ ಎಂದರು.

ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿಶ್ವವಿದ್ಯಾಲಯದ ಆವರಣದಿಂದ ಸಭಾಂಗಣದವರೆಗೆ ಘಟಿಕೋತ್ಸವ ಮೆರವಣಿಗೆ ನಡೆಯಿತು. ಮೌಲ್ಯಮಾಪನ ಕುಲಸಚಿವ ಪ್ರೊ. ಸತೀಶ್ ಅಣ್ಣಿಗೇರಿ ದಂಡಧಾರಿಯಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕುಲಸಚಿವ ಆನಂದ ಎಸ್. ದೇಶಪಾಂಡೆ, ಸೆನೆಟ್ ಸದಸ್ಯರು, ಕಾರ್ಯಕಾರಿ ಪರಿಷತ್ ಸದಸ್ಯರು, ಫ್ಯಾಕಲ್ಟಿ ಡೀನ್​ಗಳು ಭಾಗವಹಿಸಿದ್ದರು.

ABOUT THE AUTHOR

...view details