ಬೆಳಗಾವಿ:ಬೆಳಗಾವಿಯ ಪ್ರತಿಷ್ಠಿತ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ರಾಹುಕಾಲ ಭೀತಿಯಿಂದ ಪರಿಷತ್ ಸದಸ್ಯ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ವಿವೇಕರಾವ್ ಪಾಟೀಲ್ ಬೆಳಗ್ಗೆ 10 ಗಂಟೆಗೆ ನಾಮಪತ್ರ ಸಲ್ಲಿಸಿದರು.
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ರಾಹುಕಾಲ ನೋಡಿ ನಾಮಪತ್ರ ಸಲ್ಲಿಸಿದ ಜಾರಕಿಹೊಳಿ ಆಪ್ತ - undefined
ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮತ್ತೊಂದು ಅವಧಿಗೆ ಆಯ್ಕೆಯಾಗಲು ರಮೇಶ್ ಜಾರಕಿಹೊಳಿ ಆಪ್ತ ವಿವೇಕರಾವ್ ಪಾಟೀಲ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.
![ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ರಾಹುಕಾಲ ನೋಡಿ ನಾಮಪತ್ರ ಸಲ್ಲಿಸಿದ ಜಾರಕಿಹೊಳಿ ಆಪ್ತ](https://etvbharatimages.akamaized.net/etvbharat/prod-images/768-512-3239354-thumbnail-3x2-bng.jpg)
ಮತ್ತೊಂದು ಅವಧಿಗೆ ಅಧ್ಯಕ್ಷರಾಗಲು ವಿವೇಕರಾವ್ ಬಯಸಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. 10.10 ರ ನಂತರ ರಾಹುಕಾಲ ಆರಂಭವಾಗುತ್ತಿರುವುದರಿಂದ 10 ಗಂಟೆಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ನಗರದ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಯಿತು. ವಿವೇಕರಾವ್ ಪಾಟೀಲ್, ಅಮರನಾಥ ಜಾರಕಿಹೊಳಿ ಸೇರಿದಂತೆ 10 ಕ್ಕೂ ಅಧಿಕ ನಿರ್ದೇಶಕರು ಸಭೆಯಲ್ಲಿ ಭಾಗಿಯಾಗಿದ್ದರು. ಜಾರಕಿಹೊಳಿ ಬಣದಿಂದ ವಿವೇಕರಾವ್ ಅವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಮಾಡಲು ನಿರ್ಣಯ ತೆಗೆದುಕೊಳ್ಳಲಾಯಿತು. ಬಳಿಕ ಆ ಬಣದ ನಿರ್ದೇಶಕರು ಕೆಎಂಎಫ್ಗೆ ಬಂದು ಉಮೇದುವಾರಿಕೆ ಸಲ್ಲಿಸಿದರು.