ಅಥಣಿ:ಅನ್ಯ ರಾಜ್ಯಗಳಿಂದ ಬಂದವರನ್ನು ನಮ್ಮ ಗ್ರಾಮದ ಶಾಲೆಯಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಭಾವಿಸಿ ತಾಲೂಕಿನ ಸಪ್ತಸಾಗರ ಗ್ರಾಮಸ್ಥರು ಶಾಲೆಯ ಗೇಟ್ ಬಂದ್ ಮಾಡಿದ್ದಾರೆ.
ಹೋಮ್ ಕ್ವಾರಂಟೈನ್ಗೆ ವಿರೋಧ; ಶಾಲೆ ಗೇಟ್ ಬಂದ್ - villagers oppose to home quarantine who are coming other state
ಅನ್ಯ ರಾಜ್ಯಗಳಿಂದ ಬರುವವರನ್ನು ನಮ್ಮ ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ಗೆ ಒಳಪಡಿಸುತ್ತಾರೆ ಎಂದು ಭಾವಿಸಿ ಶಾಲೆಯ ಗೇಟ್ಗೆ ಸಪ್ತಸಾಗರ ಗ್ರಾಮಸ್ಥರು ಅಡ್ಡಲಾಗಿ ಮುಳ್ಳಿನ ಗಿಡಗಳನ್ನು ಹಾಕಿದ್ದರು. ತಾಲೂಕು ಆಡಳಿತ ಸ್ಪಷ್ಟನೆಯ ಬಳಿಕ ಅದನ್ನು ತೆರವುಗೊಳಿಸಿದ್ದಾರೆ.

ಶಾಲೆ ಗೇಟ್ ಬಂದ್
ಗ್ರಾಮಸ್ಥರು ಸರ್ಕಾರಿ ಪ್ರಾಥಮಿಕ ಶಾಲೆ ಗೇಟ್ಗೆ ಮುಳ್ಳಿನ ಗಿಡಗಳನ್ನು ಅಡ್ಡಲಾಗಿ ಹಾಕಿದ್ದರು. ಅಲ್ಲಿ ಯಾರನ್ನೂ ಕ್ವಾರಂಟೈನ್ ಮಾಡುವುದಿಲ್ಲ ಎಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದ ಬಳಿಕ ಮುಳ್ಳಿನ ಗಿಡಗಳನ್ನು ಗ್ರಾಮಸ್ಥರು ತೆರವುಗೊಳಿಸಿದ್ದಾರೆ.