ಅಥಣಿ: ರಾಜ್ಯ ಸರ್ಕಾರ ಬಹು ನಿರೀಕ್ಷಿತ ಅಧಿಕಾರಿಗಳ ನಡೆ ಗ್ರಾಮದ ಕಡೆ ಎಂಬ ವಿನೂತನ ಕಾರ್ಯಕ್ರಮ ಎರಡನೇ ತಿಂಗಳು ಕೋಕಟನೂರ ಗ್ರಾಮದಲ್ಲಿ ನಡೆಯಿತು. ಅಧಿಕಾರಿಗಳು ಸಮಯಕ್ಕೆ ಬಾರದ ಹಾಗೂ ಸಮಸ್ಯೆಯ ಪರಿಹಾರ ನೀಡುವ ಇಲಾಖೆ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.
ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾದ ಕಾರ್ಯಕ್ರಮ ಒಂದು ಗಂಟೆ ಸಮೀಪದಲ್ಲಿ ಪ್ರಾರಂಭವಾಯಿತು. ಅಲ್ಲದೆ ಕೆಲವು ಇಲಾಖೆಗಳ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರಾರಂಭಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದರು. ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಸಮಯಕ್ಕೆ ಸರಿಯಾಗಿ ಬಂದರೂ, ಕೆಲವು ಇಲಾಖೆಯ ಅಧಿಕಾರಿಗಳು ತಮಗೆ ತೋಚಿದ ಸಮಯಕ್ಕೆ ಬರುತ್ತಿದ್ದು ಜನರು ಅವರ ದಾರಿ ಕಾದು ಕಾದು ಮನೆಗೆ ತೆರಳಿ ಕಾರ್ಯಕ್ರಮ ಖಾಲಿ ಖಾಲಿಯಾಗಿ ಕಂಡು ಬಂತು.