ಬೆಳಗಾವಿ: ಜಿಲ್ಲೆಯ ಹಿರಿಯ ಕುಸ್ತಿಪಟು ಹಾಗೂ ಮೂರು ಸಲ ಕರ್ನಾಟಕ ಕೇಸರಿ ಪುರಸ್ಕೃತ ಚಂದ್ರು ಕುರವಿನಕೊಪ್ಪ (65) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಚಂದ್ರು ಕುರವಿನಕೊಪ್ಪ ನಿಧನಕ್ಕೆ ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ.
ಓದಿ:'ಚಾಟ್' ಅಂಗಡಿಯವರ ಮಧ್ಯೆ ಹೊಡೆದಾಟ.. ನಡುರಸ್ತೆಯಲ್ಲೇ ನಡೀತು ಭೀಕರ ಫೈಟ್!
ಚಂದ್ರು ಕುರವಿನಕೊಪ್ಪ ಮೂರು ಸಲ ಕರ್ನಾಟಕ ಕೇಸರಿ ಪುರಸ್ಕಾರ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಯುವ ಕುಸ್ತಿಪಟುಗಳಿಗೆ ತರಬೇತಿ ನೀಡುತ್ತಿದ್ದ ಅವರು ಜಿಲ್ಲೆಯ ರೇಸಲಿಂಗ್ ಕ್ರೀಡೆಯ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂದುಗಳನ್ನು ಅಗಲಿದ್ದಾರೆ. ಕೆ ಕೆ ಕೊಪ್ಪ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ.