ಚಿಕ್ಕೋಡಿ/ಬೆಳಗಾವಿ: ಗಡಿಭಾಗದ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ವಿಜೃಂಭಣೆಯಿಂದ ಜರುಗಿದ ಯಡೂರಿನ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ! - ಚಿಕ್ಕೋಡಿ ಲೇಟೆಸ್ಟ್ ಜಾತ್ರೆ ಸುದ್ದಿ
ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರಿನ ಶ್ರೀ ವೀರಭದ್ರೇಶ್ವರ ಮಹಾರಥೋತ್ಸ ವಿಜೃಂಭಣೆಯಿಂದ ಜರುಗಿತು.
ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಪ್ರಸಿದ್ಧಿಯನ್ನು ಪಡೆದಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಶ್ರೀ ವೀರಭದ್ರೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಯಡೂರಿನ ದೇವಸ್ಥಾನದಿಂದ ಪ್ರಾರಂಭವಾದ ರಥೋತ್ಸವು ಬಸ್ ನಿಲ್ದಾಣದ ಮೂಲಕ ಹಳೆ ಯಡೂರಿನ ಬಸವೇಶ್ವರ ತಲುಪಿ ಮತ್ತೆ ದೇವಸ್ಥಾನಕ್ಕೆ ಬಂದು ತಲುಪಿತ್ತು.
ರಥೋತ್ಸವ ಉದ್ದಕ್ಕೂ ಭಕ್ತರ ಭಕ್ತಿಯ ಉತ್ಸಾಹ ಮುಗಿಲು ಮುಟ್ಟಿತ್ತು. ಭಕ್ತರು ಭಕ್ತಿಯಿಂದ ತೇರಿನ ಮೇಲೆ ಕೊಬ್ಬರಿ, ಖಾರಿಕ, ಸಕ್ಕರೆ ಹೂವುಗಳನ್ನು ಭಕ್ತಿಯಿಂದ ಅರ್ಪಣೆಯನ್ನು ಮಾಡಿದರು. ಸಾಕ್ಷಾತ್ ಶ್ರೀ ವೀರಭದ್ರೇಶ್ವರ ದೇವರು ತೇರಿನಲ್ಲಿ ವಾಸಿಯಾಗಿರುತ್ತಾನೆ ಎಂಬ ನಂಬಿಕೆ ಭಕ್ತರದ್ದು. ಹರ ಹರ ಮಹಾದೇವ, ಶ್ರೀ ವೀರಭದ್ರೇಶ್ವರ ಮಹಾರಾಜ್ಕೀ ಜೈ ಎಂಬ ಘೋಷಣೆಯನ್ನು ಕೂಗಿದರು. ಭಕ್ತರು ತೇರನ್ನು ಭಕ್ತಿ ಭಾವದಿಂದ ಎಳೆದರು. ತೇರಿನ ಉದ್ದಕ್ಕೂ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಹಿಸಿದ್ದವು.