ಬೆಳಗಾವಿ: ನದಿ ತೀರದ ವಡಗಾಂವ ನಿರಾಶ್ರಿತರಿಗೆ ಮಹಾನಗರ ಪಾಲಿಕೆ ನೀಡಲಾಗಿರುವ ಜಮೀನಿನಲ್ಲಿ ಅಪರಿಚಿತರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡುವುದನ್ನು ಖಂಡಿಸಿ ವಡಗಾಂವ, ಮಾಧವಪೂರದ ನಿರಾಶ್ರಿತರು ಡಿಸಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಿರಾಶ್ರಿತರ ಭೂಮಿಯಲ್ಲಿ ಅನಧಿಕೃತ ಮನೆಗಳ ನಿರ್ಮಾಣ.. ನ್ಯಾಯ ಒದಗಿಸುವಂತೆ ಡಿಸಿಗೆ ಮನವಿ - ಬೆಳಗಾವಿ ವಡಗಾಂವ ಸುದ್ದಿ
ಮಲಪ್ರಭಾ ಮುಳುಗಡೆ ಪ್ರದೇಶವಾದ ಇಲ್ಲಿನ ವಡಗಾಂವ ವ್ಯಾಪ್ತಿಯ 237 ಜನ ನಿರಾಶ್ರಿತರಿಗೆ 4 ಎಕರೆ ಜಮೀನನ್ನು ಮಂಜೂರ ಮಾಡಿ ಹಕ್ಕು ಪತ್ರ ನೀಡಲಾಗಿತ್ತು. ಆದರೀಗ ಆ ಪ್ರದೇಶದಲ್ಲಿ ಅಪರಿಚಿತರು ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಜರುಗಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

1977ರಲ್ಲಿ ನದಿ ತೀರದ ಜನರಿಗೆ ಸರ್ಕಾರ ಜಮೀನು ಒದಗಿಸಿದೆ. ಫಲಾನುಭವಿಗಳಿಗೆ ಹಕ್ಕು ಪತ್ರವನ್ನೂ ನೀಡಲಾಗಿದೆ. ಆದರೂ ಯಾವುದೇ ಅನುಮತಿ ಇಲ್ಲದೆ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಇದು ಘೋರ ಅಪರಾಧವಾಗಿದ್ದು ಇವರ ವಿರುದ್ಧ ಕೂಡಲೇ ಸರ್ಕಾರ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.