ಬೆಳಗಾವಿ: ಮಹಾನಗರ ಪಾಲಿಕೆ ಪಲಾವ್ ನೀಡಿದರೂ ಚಪಾತಿ ಬೇಕೆಂದು ರಾಜಸ್ಥಾನ ಮೂಲದ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ.
ಪಲಾವ್ ಬೇಡ.. ಚಪಾತಿ, ಹಾಲು ಕೊಡಿ ಅಂತಾರೆ: ಬೆಳಗಾವಿಯಲ್ಲಿ ರಾಜಸ್ಥಾನ ಮೂಲದ ಕಾರ್ಮಿಕರ ಕಿರಿಕ್
ಮಹಾನಗರ ಪಾಲಿಕೆ ಸಿಬ್ಬಂದಿ ಕಾರ್ಮಿಕರಿಗೆ ಪಲಾವ್ ಪ್ಯಾಕೇಟ್ ನೀಡಿದ್ದಾರೆ. ಆದ್ರೆ ಈ ಆಹಾರ ಸ್ವೀಕರಿಸದೇ ರಾಜಸ್ಥಾನ ಕಾರ್ಮಿಕರು ಚಪಾತಿ, ಹಾಲು ಕೊಡಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರ ಕುಟುಂಬ ಬೆಳಗಾವಿ ಮಾರ್ಗವಾಗಿ ಲಾರಿಯಲ್ಲಿ ರಾಜಸ್ಥಾನಕ್ಕೆ ತೆರಳುವಾಗ ಬೆಳಗಾವಿ ಪೊಲೀಸರು ತಡೆದಿದ್ದಾರೆ. ಇವರನ್ನು ಇಲ್ಲಿನ ನೆಹರು ನಗರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ನಲ್ಲಿ ಇರಿಸಲಾಗಿದೆ.
10 ಗಂಟೆಯಾದರೂ ನಮಗೆ ಊಟದ ವ್ಯವಸ್ಥೆ ಮಾಡಿಲ್ಲ. ಮಕ್ಕಳಿಗೆ ಕುಡಿಯಲು ಹಾಲೂ ನೀಡುತ್ತಿಲ್ಲ. ನಮ್ಮನ್ನು ಬಿಟ್ಟು ಬಿಡಿ, ನಾವು ನಮ್ಮ ರಾಜ್ಯಕ್ಕೆ ಹೋಗುತ್ತೇವೆ ಎಂದು ಕಾರ್ಮಿಕರು ಕಿರಿಕ್ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ ಸಿಬ್ಬಂದಿ ಕಾರ್ಮಿಕರಿಗೆ ಪಲಾವ್ ಪ್ಯಾಕೇಟ್ ನೀಡಿದ್ದಾರೆ. ಈ ಆಹಾರ ಸ್ವೀಕರಿಸದೇ ಕಾರ್ಮಿಕರು ಉದ್ಧಟತನ ಪ್ರದರ್ಶಿಸಿದ್ದಾರೆ. ನಾವು ಆಹಾರ ಸ್ವೀಕರಿಸಲ್ಲ, ನಮ್ಮನ್ನು ಹೊರಗೆ ಬಿಡಿ ಎಂದು ಹಠ ಹಿಡಿದು ಕುಳಿತಿದ್ದಾರೆ. ಇದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.