ಕರ್ನಾಟಕ

karnataka

ETV Bharat / state

ಕಬ್ಬಿನ ಬಾಕಿ ಬಿಲ್ ವಿಚಾರ.. ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ವಿಚಾರಣೆ - undefined

2 ವರ್ಷಗಳ ಹಿಂದಿನ ಕಬ್ಬಿನ ಬಾಕಿ ಬಿಲ್ ನೀಡದ ಕಾರ್ಖಾನೆಗಳ ವಿರುದ್ಧ ರೈತರು ಸಲ್ಲಿಸಿದ ದೂರಿನ ವಿಚಾರಣೆ ಇಂದು ನಡೆಯಿತು. ಬಿಲ್ ಬಾಕಿ ಇರುವ ರೈತರ ಜೊತೆ ಸಕ್ಕರೆ ಆಯುಕ್ತರು ವಿಚಾರಣೆ ನಡೆಸಿದರು.

ಕಬ್ಬಿನ ಬಾಕಿ ಬಿಲ್

By

Published : Jun 25, 2019, 3:39 PM IST

ಬೆಳಗಾವಿ : 2 ವರ್ಷಗಳ ಹಿಂದಿನ ಕಬ್ಬಿನ ಬಾಕಿ ಬಿಲ್ ನೀಡದ ಕಾರ್ಖಾನೆಗಳ ವಿರುದ್ಧ ರೈತರು ಸಲ್ಲಿಸಿದ ದೂರಿನ ವಿಚಾರಣೆ ನಡೆಯಿತು. ಬಿಲ್ ಬಾಕಿ ಇರುವ ರೈತರ ಜೊತೆ ಸಕ್ಕರೆ ಆಯುಕ್ತರು ವಿಚಾರಣೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿ ಇಂದು ಸಕ್ಕರೆ ಆಯುಕ್ತ ಶಾಂತಾರಾಮ ವಿಚಾರಣೆ ನಡೆಸಿದರು. ಚಿಕ್ಕೋಡಿ ತಾಲೂಕಿನ‌ ಬೇಡಕಿಹಾಳದ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ, ಹಿರೇನಂದಿ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆ ಸೇರಿದಂತೆ ಜಿಲ್ಲೆಯ ವಿವಿಧ ಕಾರ್ಖಾನೆಗಳು 2017-18ನೇ ಸಾಲಿನ ಕಬ್ಬಿನ ಬಾಕಿ ನೀಡಿಲ್ಲ ಎಂದು ದೂರು ನೀಡಿದ್ದರು. ದೂರು ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ಸಕ್ಕರೆ ಆಯುಕ್ತ ಶಾಂತಾರಾಮ ರೈತರಿಗೆ ನೋಟಿಸ್ ನೀಡಿದ್ದರು.

ಕಬ್ಬಿನ ಬಾಕಿ ಬಿಲ್

ನೂರಾರು ರೈತರು ದೂರು ಸಲ್ಲಿಸಿರುವುದರಿಂದ ನೋಟಿಸ್​ನಲ್ಲಿ ಸಮಯ ನಿಗದಿ ಮಾಡಲಾಗಿದ್ದು, ಸಂಜೆವರೆಗೂ ಜಿಲ್ಲೆಯ ನೂರಾರು ರೈತರು ವಿಚಾರಣೆಗೆ ಹಾಜರಾಗಲಿದ್ದಾರೆ.

For All Latest Updates

TAGGED:

ABOUT THE AUTHOR

...view details