ಬೆಳಗಾವಿ:ಚಲಿಸುತ್ತಿದ್ದ ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿಯೋರ್ವನ ಶವ ದೆಸೂರ-ಖಾನಾಪೂರ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾದ ಘಟನೆ ನಡೆದಿದೆ.
ಚಲಿಸುತ್ತಿದ್ದ ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು - Unknown person died news belagavi'
ಚಲಿಸುತ್ತಿದ್ದ ರೈಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೊಬ್ಬನ ಶವ ಬೆಳಗಾವಿಯ ದೆಸೂರ- ಖಾನಾಪೂರ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿದೆ. ಮೃತ ವ್ಯಕ್ತಿ ಐದು ಅಡಿ ಎತ್ತರ, ಸಾದಾಗಪ್ಪು ಮೈಬಣ್ಣ, ಸದೃಢ ಕೂದಲು, ನೀಟಾದ ಮೂಗು, ಚಿಕ್ಕ ಮೀಸೆ, ಅಗಲವಾದ ಹಣೆ ಹೊಂದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಂದಾಜು 30 ವರ್ಷ ವಯಸ್ಸಿನ ಈ ವ್ಯಕ್ತಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನದ ಮೇರೆಗೆ ಬೆಳಗಾವಿ ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಮೃತ ವ್ಯಕ್ತಿ ಐದು ಅಡಿ ಎತ್ತರ, ಸಾದಾಗಪ್ಪು ಮೈಬಣ್ಣ, ಸದೃಢ ಕೂದಲು, ನೀಟಾದ ಮೂಗು, ಚಿಕ್ಕ ಮೀಸೆ, ಅಗಲವಾದ ಹಣೆ ಹೊಂದಿದ್ದಾನೆ.
ಇನ್ನು ಬಲಗೈ ಮೇಲೆ ಕುದುರೆ, ಡಮರುಗ ಚಿತ್ರ ಹಾಗೂ ಕನ್ನಡದಲ್ಲಿ ಗುಲಾಬಿ ಹಚ್ಚೆ ಹಾಕಿಸಿಕೊಂಡಿದ್ದಾನೆ. ಅಲ್ಲದೇ ಎಡಗೈ ಮೇಲೆ ಸುಟ್ಟ ಗಾಯದ ತೋಳಿನ ಹತ್ತಿರ ಹಾರ್ಟ್ ಚಿಹ್ನೆ ಇದೆ. ಅದರೊಳಗೆ ಇಂಗ್ಲೀಷ್ B,B ಹಾಗೆಯೇ soldier ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ. ಈತನ ಗುರುತು ಪತ್ತೆಯಾದರೆ ದೂ.0831,2405273 ಹಾಗೂ ಮೊ.9480802127ಗೆ ಸಂಪರ್ಕಿಸಲು ಬೆಳಗಾವಿ ರೈಲ್ವೆ ಪೊಲೀಸರು ತಿಳಿದ್ದಾರೆ.