ಬೆಳಗಾವಿ :ಸರ್ಕಾರದ ಯೋಜನೆಗಳನ್ನು ಅರ್ಹ ರೈತರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಬೇಕೆಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕಾಡಾ ಕಚೇರಿಯಲ್ಲಿ ಗ್ರಾಮೀಣ ಮತ ಕ್ಷೇತ್ರದ ರೈತರು, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರೈತರು ಕಷ್ಟಪಟ್ಟು ಬೆಳೆ ಬೆಳೆದು ದೇಶದ ಹೊಟ್ಟೆ ತುಂಬಿಸುತ್ತಿದ್ದಾರೆ. ಅವರ ಕಷ್ಟಕ್ಕೆ ಸರ್ಕಾರ ನೆರವಾಗಲಿದೆ ಎಂದರು.
ರೈತರು ಮೊದಲೇಕೊರೊನಾ ಲಾಕ್‍ಡೌನ್ ಸಂಕಷ್ಟದಲ್ಲಿದ್ದಾರೆ. ಇದರ ಮಧ್ಯೆ ಕಷ್ಟಪಟ್ಟು ತರಕಾರಿ ಸೇರಿದಂತೆ ಇತರ ಬೆಳೆಗಳನ್ನ ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದ್ರೂ ಅದರಿಂದ ಲಾಭ ಬರದೇ ನಷ್ಟ ಅನುಭವಿಸ್ತಿದ್ದಾರೆ.
ಆದರೆ, ಇಷ್ಟಾದ್ರೂ ಸಹ ಅಧಿಕಾರಿಗಳು ರೈತರನ್ನ ಭೇಟಿ ಮಾಡದೆ ನಿರ್ಲಕ್ಷ್ಯತೆ ವಹಿಸುತ್ತಿದ್ದಾರೆ. ಅಲ್ಲದೇ ಬೆಳೆ ಹಾನಿ ಕುರಿತು ಜಿಪಿಎಸ್ ಸಮೀಕ್ಷೆ ಕೂಡ ಸರಿಯಾಗಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.