ಬೆಳಗಾವಿ: ಕೊಲೆ ಪ್ರಕರಣವೊಂದರಲ್ಲಿ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹ ಸೇರಿರುವ ವಿಚಾರಣಾಧೀನ ಕೈದಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮೂಳೆ ಗ್ರಾಮದ ಸಿದ್ದಗೌಡ ಹಿಪ್ಪಲಕರ್ (34) ಆತ್ಮಹತ್ಯೆಗೆ ಶರಣಾಗಿರುವ ಕೈದಿ. ಪಕ್ಕದ ಮನೆಯ ಮಗುವನ್ನು ಕೊಲೆಗೈದ ಆರೋಪ ಈತನ ಮೇಲಿದೆ. ಕಳೆದ ಆರು ವರ್ಷಗಳಿಂದ ವಿಚಾರಣಾಧೀನ ಕೈದಿಯಾಗಿ ಸಿದ್ದಗೌಡ ಹಿಂಡಲಗಾ ಜೈಲಿನಲ್ಲಿದ್ದನು.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಸಾವು - under trial accused committed suicide in hindalaga jail
ನಾಲ್ಕು ದಿನಗಳ ಹಿಂದೆ ಸಿದ್ದಗೌಡ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ತಕ್ಷಣವೇ ಇದನ್ನು ಗಮನಿಸಿದ ಸಹ ಕೈದಿಗಳು ಹಗ್ಗ ಬಿಚ್ಚಿ ಆತನನ್ನು ಕೆಳಗಿಳಿಸಿದ್ದರು. ನಂತರ ಜೈಲು ಸಿಬ್ಬಂದಿ ತಕ್ಷಣವೇ ಆತನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೈದಿ ಸಿದ್ದಗೌಡ ಹಿಪ್ಪಲಕರ್ ಇಂದು ಮೃತಪಟ್ಟಿದ್ದಾನೆ.
![ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ವಿಚಾರಣಾಧೀನ ಕೈದಿ ಸಾವು Siddhagouda Hippalakar (34)](https://etvbharatimages.akamaized.net/etvbharat/prod-images/768-512-14872031-thumbnail-3x2-sanju.jpg)
ಸಿದ್ದಗೌಡ ಹಿಪ್ಪಲಕರ್ (34)
ನಾಲ್ಕು ದಿನಗಳ ಹಿಂದೆ ಸಿದ್ದಗೌಡ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ತಕ್ಷಣವೇ ಇದನ್ನು ಗಮನಿಸಿದ ಸಹ ಕೈದಿಗಳು ಹಗ್ಗ ಬಿಚ್ಚಿ ಕೆಳಗಿಳಿಸಿದ್ದರು. ಜೈಲು ಸಿಬ್ಬಂದಿ ತಕ್ಷಣವೇ ಈತನನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಓದಿ:ಪುಂಡಾನೆ ಹಿಡಿಯುವಾಗ ಮಿಸ್ ಫೈರ್ : ಪ್ರಾಣಾಪಾಯದಿಂದ ಪಾರಾದ ಅರಣ್ಯ ಇಲಾಖೆ ಸಿಬ್ಬಂದಿ