ಚಿಕ್ಕೋಡಿ:8 ಬಾರಿ ಶಾಸಕರಾದ ಉಮೇಶ ಕತ್ತಿಯವರಿಗೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅಭಿಪ್ರಾಯಪಟ್ಟಿದ್ದಾರೆ.
ಉಮೇಶ ಕತ್ತಿಗೆ ಸಚಿವ ಸ್ಥಾನ ನೀಡಬೇಕಿತ್ತು: ಶಾಸಕ ದುರ್ಯೋಧನ ಐಹೊಳೆ - MLA duryodana aihole
ಮೊದಲ ಸಚಿವ ಸಂಪುಟದಲ್ಲಿಯೇ ಸಚಿವ ಸ್ಥಾನ ನೀಡಬೇಕಿತ್ತು. ಈಗ ಎರಡನೇ ಹಂತದಲ್ಲೂ ಉಮೇಶ್ ಕತ್ತಿಯವರಿಗೆ ನೀಡಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ.
ಶಾಸಕ ದುರ್ಯೋಧನ ಐಹೊಳೆ
ಪಟ್ಟಣದ ಸ್ವಗೃಹದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದಿಂದ ಅತಿ ಹೆಚ್ಚು ಶಾಸಕರು ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಬೆಳಗಾವಿಯಲ್ಲಿ 13 ಶಾಸಕರು ಜಯ ಗಳಿಸಿದ್ದಾರೆ. ಅದಕ್ಕಾಗಿ ಈಗಾಗಲೇ 4 ಮಂತ್ರಿ ಸ್ಥಾನವನ್ನು ನೀಡಲಾಗಿದೆ. ಜೊತಗೆ ಉಮೇಶ ಕತ್ತಿಗೂ ಮಂತ್ರಿಗಿರಿ ಕೊಡಬೇಕಿತ್ತು ಎಂದು ಹೇಳಿದರು.
ಮೊದಲ ಸಚಿವ ಸಂಪುಟದಲ್ಲಿಯೇ ಸಚಿವ ಸ್ಥಾನ ನೀಡಬೇಕಿತ್ತು. ಈಗ ಎರಡನೇ ಹಂತದಲ್ಲೂ ನೀಡಲಾಗಲಿಲ್ಲ ಎಂದರು.