ಕರ್ನಾಟಕ

karnataka

ETV Bharat / state

ಧಾರಾಕಾರ ಮಳೆ; ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದ ಉಮೇಶ ಕತ್ತಿ - Chikkodi rain news

ಹುಕ್ಕೇರಿಯಲ್ಲಿ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಪಟ್ಟಣದ ಮಸೀದಿಗೆ ನೀರು ನುಗ್ಗಿರುವ ಸ್ಥಳವನ್ನು ಪರಶೀಲಿಸಿದ ಬಳಿಕ‌ ಮನೆ ಕಳೆದುಕೊಂಡ ಕುಟುಂಬಗಳ ಸಮಸ್ಯೆಗಳನ್ನು ಆಲಿಸಿದರು.

Umesh Katti visited damaged site
ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದ ಉಮೇಶ ಕತ್ತಿ

By

Published : Oct 12, 2020, 5:45 PM IST

Updated : Oct 12, 2020, 6:54 PM IST

ಚಿಕ್ಕೋಡಿ :ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಭಾರಿ ಪ್ರಮಾಣದ ನೀರು ಇಲ್ಲಿನ ಹಲವು ಮನೆಗಳಿಗೆ ನುಗ್ಗಿದ್ದರ ಪರಿಣಾಮ ಸಾಕಷ್ಟು ಹಾನಿ ಸಂಭವಿಸಿದೆ. ಹಲವೆಡೆ ಮನೆಯ ಗೋಡೆಗಳು ಕುಸಿದ ವರದಿಯಾಗಿದರೆ, ಉಪಯುಕ್ತ ವಸ್ತುಗಳು ನೀರಿನಲ್ಲಿ ತೇಲಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿದೆ.

ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು ಶಾಸಕ ಉಮೇಶ ಕತ್ತಿ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಹುಕ್ಕೇರಿ ಪಟ್ಟಣದ ಮಸೀದಿಗೆ ನೀರು ನುಗ್ಗಿರುವ ಸ್ಥಳವನ್ನು ಪರಶೀಲಿಸಿದ ಬಳಿಕ‌ ಮನೆ ಕಳೆದುಕೊಂಡ ಕುಟುಂಬಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದರು.

ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದ ಉಮೇಶ ಕತ್ತಿ

ಇದೇ ವೇಳೆ ಮನೆ ಕಳೆದುಕೊಂಡವರಿಗೆ ಪುರಸಭೆ ವತಿಯಿಂದ ಗುರುತಿಸಲಾಗಿರುವ 20 ಎಕರೆ ಜಾಗದಲ್ಲಿ ನೂತನ ಮನೆ ನಿರ್ಮಾಣ ಮಾಡಿಸಿಕೊಡುವ ಭರವಸೆಯನ್ನು ನೀಡಿದರು. ಈ ಬಗ್ಗೆ ವರದಿ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.

Last Updated : Oct 12, 2020, 6:54 PM IST

ABOUT THE AUTHOR

...view details