ಬೆಳಗಾವಿ: ಮಾಧ್ಯಮಗಳಲ್ಲಿ ಕೊರೊನಾ ಸುದ್ದಿಯನ್ನು ಡೈವರ್ಟ್ ಮಾಡಲು ಭೋಜನ ಕೂಟ ಆಯೋಜಿಸಿದ್ದೆ ಎನ್ನುವ ಮೂಲಕ ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಯಲ್ಲಿ ಎದ್ದಿದೆ ಎನ್ನಲಾದ ಬಂಡಾಯಕ್ಕೆ ತೇಪೆ ಹಚ್ಚುವ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಕೊರೊನಾ ಸುದ್ದಿ ಡೈವರ್ಟ್ ಮಾಡಲು ಭೋಜನ ಕೂಟ: ಉಮೇಶ್ ಕತ್ತಿ ಗೊಂದಲದ ಹೇಳಿಕೆ - umesh katti latest news updates
ಮಾಧ್ಯಮಗಳಲ್ಲಿ ಕೊರೊನಾ ಸುದ್ದಿಯ ದಿಕ್ಕು ಬದಲಿಸಲು ಭೋಜನ ಕೂಟ ಆಯೋಜಿಸಿದ್ದೆ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿಕೆ ನೀಡಿ ಮತ್ತೊಂದು ಗೊಂದಲ ಸೃಷ್ಟಿಸಿದ್ದಾರೆ.
ಉಮೇಶ್ ಕತ್ತಿ ಗೊಂದಲದ ಹೇಳಿಕೆ
ಬೆಳಗಾವಿಯ ತಮ್ಮ ನಿವಾಸದ ಎದುರು ಈ ರೀತಿ ಹೇಳಿಕೆ ನೀಡಿರುವ ಅವರು, ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಭೋಜನ ಕೂಟ ಆಯೋಜಿಸಿದ್ದು, ಯಡಿಯೂರಪ್ಪ ವಿರುದ್ಧ ಅಲ್ಲ, ಬಿಜೆಪಿ ವಿರುದ್ಧ ಅಲ್ಲ, ಹೈಕಮಾಂಡ್ ವಿರುದ್ಧವೂ ಅಲ್ಲ. ಕೊರೊನಾ ಸುದ್ದಿಯನ್ನು ಡೈವರ್ಟ್ ಮಾಡುವ ಸಲುವಾಗಿ ಭೋಜನ ಕೂಟ ಆಯೋಜಿಸಿದ್ದೆ ಎಂದಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿರುವ ಹಿರಿಯ ಶಾಸಕ ಉಮೇಶ್ ಕತ್ತಿ ದಿಢೀರ್ನೇ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.