ಚಿಕ್ಕೋಡಿ: ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ ಎಂದು ಹೇಳಿರುವ ಹುಕ್ಕೇರಿ ಬಿಜೆಪಿ ಶಾಸಕ ಉಮೇಶ್ ಕತ್ತಿ ಅನರ್ಹ ಶಾಸಕರಿಗೆ ಆಘಾತ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಹಿರೇಮಠದಲ್ಲಿ ಆಯೋಜಿಸಿದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ರಾಜು ಕಾಗೆಗೆ ಕಾಗವಾಡದಿಂದ ಟಿಕೆಟ್ ನೀಡಲಾಗುವುದು, ನೀಡದಿದ್ದರೆ ಅವಾಗ ನೋಡೋಣ ಎಂದರು.