ಕರ್ನಾಟಕ

karnataka

ETV Bharat / state

ಬಿಜೆಪಿ ಬ್ಯಾನರ್​ನಲ್ಲಿ ಕತ್ತಿ ಫೋಟೋ ಮಾಯ: ಸೈಡ್​ಲೈನ್ ಚರ್ಚೆಗೆ ಪುಷ್ಠಿ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಕುರಿತ ಬ್ಯಾನರ್​ನಲ್ಲಿ ಮಾಜಿ ಸಚಿವ ಉಮೇಶ್​ ಕತ್ತಿ ಫೋಟೋ ಹಾಕದಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.

dsd
ಜೆಪಿ ಬ್ಯಾನರ್​ನಲ್ಲಿ ಕತ್ತಿ ಫೋಟೋ ಮಾಯ

By

Published : Dec 4, 2020, 10:28 AM IST

ಬೆಳಗಾವಿ: ಬಿಜೆಪಿ ಕಾರ್ಯಕಾರಿಣಿ ಸಭೆ ಬ್ಯಾನರ್​ನಲ್ಲಿ ಮಾಜಿ ಸಚಿವ ಉಮೇಶ್​ ಕತ್ತಿ ಫೋಟೋ ಮಾಯವಾಗಿದೆ.

ಬಿಜಿಪಿ ಕಾರ್ಯಕಾರಿಣಿ ಸಭೆಗೆ ಸಂಬಂಧಿಸಿದ ಬ್ಯಾನರ್​ನಲ್ಲಿ ಉಮೇಶ್‌ ಕತ್ತಿ ಫೋಟೋ ಇಲ್ಲ.

ಜಿಲ್ಲೆಯಲ್ಲಿ ಇಂದು ನಡೆಯುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಕುಂದಾನಗರಿ ಕೇಸರಿಮಯವಾಗಿ ರೂಪುಗೊಂಡಿದೆ. ಎಲ್ಲೆಂದರಲ್ಲಿ ಬಿಜೆಪಿ ಧ್ವಜ, ಬ್ಯಾನರ್‌ಗಳನ್ನು ಹಾಕಿದ್ದು ಜಿಲ್ಲೆ ಪಕ್ಷದ ರಾಷ್ಟೀಯ ನಾಯಕರು, ಮುಂಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸ್ವಾಗತಕ್ಕೆ ಅಣಿಯಾಗಿದೆ.

ಆದ್ರೆ, ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಉಮೇಶ ಕತ್ತಿ ಭಾವಚಿತ್ರ ಯಾವ ಬ್ಯಾನರ್​ನಲ್ಲಿಯೂ ಕಾಣುತ್ತಿಲ್ಲ. ಏಳು ಬಾರಿ‌ ಶಾಸಕನಾಗಿ, ಸಚಿವನಾಗಿಯೂ ಕೆಲಸ ಮಾಡಿರುವ ಉಮೇಶ್​ ಕತ್ತಿಗೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗುವ ಭಾಗ್ಯ ಸಿಗಲಿಲ್ಲ. ಇದರಿಂದಾಗಿ ಹಲವು ಬಾರಿ ಬಿಎಸ್​ವೈ ವಿರುದ್ಧವೇ ಅವರು ಬಂಡಾಯ ಎದ್ದು ಆಕ್ರೋಶ ಹೊರಹಾಕಿದ್ದರು.

ಓದಿ:ಇಂದು ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ

ಒಂದು ವೇಳೆ ಕತ್ತಿ ಫೋಟೋ ಹಾಕಿದ್ರೆ ಯಡಿಯೂರಪ್ಪನವರ ಸಿಟ್ಟಿಗೆ ಗುರಿಯಾಗಬೇಕಾದೀತು ಎಂಬ ಆತಂಕ ಇದೆ ಎನ್ನಲಾಗುತ್ತಿದೆ. ಆದ್ರೆ ಇದೆಲ್ಲವನ್ನೂ ನೋಡಿದಾಗ ಬಿಜೆಪಿ, ಕತ್ತಿಯನ್ನು ಸೈಡ್ ಲೈನ್ ಮಾಡುತ್ತಿದೆ ಎಂಬ ಚರ್ಚೆ ಹುಟ್ಟು ಹಾಕಿದೆ.

ರಾಜ್ಯ ಕಾರ್ಯಕಾರಿಣಿ ಸಭೆಯ ಬ್ಯಾನರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಿಎಸ್​ವೈ, ರಾಜ್ಯಾಧ್ಯಕ್ಷ ‌ನಳೀನ್​ ಕುಮಾರ್ ಕಟೀಲ್, ಉಸ್ತುವಾರಿ ರಮೇಶ್​ ಜಾರಕಿಹೊಳಿ ಹಾಗೂ ಸ್ಥಳೀಯ ಶಾಸಕರಾದ ಅಭಯ್ ಪಾಟೀಲ, ಅನಿಲ ಬೆನಕೆ, ಬಿಜೆಪಿ ಜಿಲ್ಲಾಧ್ಯಕ್ಷರ ಫೋಟೋಗಳಿವೆ.

ABOUT THE AUTHOR

...view details