ಬೆಳಗಾವಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಹುಕ್ಕೇರಿ ಶಾಸಕ ಉಮೇಶ ಕತ್ತಿ ಅಕ್ಕಪಕ್ಕವೇ ಕುಳಿತು ಸಂಜೆಯ ಉಪಹಾರ ಸೇವಿಸಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಿಂದ ನೇರವಾಗಿ ಉಮೇಶ ಕತ್ತಿ ಮಾಲೀಕತ್ವದ ಹೋಟೆಲ್ ಯುಕೆ 27ಗೆ ಆಗಮಿಸಿದ ಯಡಿಯೂರಪ್ಪ, ಕತ್ತಿ ಅವರ ಪಕ್ಕವೇ ಕುಳಿತು ಉಪಹಾರ ಹಾಗೂ ಚಹಾ ಸೇವಿಸಿದರು. ನಂತರ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.
ಸಿಎಂ ಜೊತೆ ಉಪಹಾರ ಸೇವಿಸಿದ ಮಾಜಿ ಸಚಿವ ಉಮೇಶ್ ಕತ್ತಿ.. ಉಮೇಶ ಕತ್ತಿ ಮನವೊಲಿಸುವ ಯತ್ನ:
ಸಚಿವ ಸಂಪುಟದಲ್ಲಿ ಅವಕಾಶ ಸಿಗದಿದಕ್ಕೆ ಸಿಎಂ ಯಡಿಯೂರಪ್ಪ ಜತೆಗೆ ಉಮೇಶ ಕತ್ತಿ ಮುನಿಸಿಕೊಂಡಿದ್ದರು. ಅಲ್ಲದೇ ಪ್ರವಾಹದ ಸಂದರ್ಭದಲ್ಲಿ ಬೆಳಗಾವಿಗೆ ಆಗಮಿಸಿದ್ದ ಸಿಎಂ ಅವರಿಂದ ಕತ್ತಿ ಅಂತರ ಕಾಯ್ದುಕೊಂಡಿದ್ದರು. ಉಪ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆ ಸ್ವತಃ ಸಿಎಂ ಅವರೇ ಉಮೇಶ ಕತ್ತಿ ಅವರ ಮನವೊಲಿಸುವ ಯತ್ನಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.