ಕರ್ನಾಟಕ

karnataka

ETV Bharat / state

ಪಾರ್ಟಿ ಮುಗಿಸಿ ಹಿಂತಿರುವಾಗ ಭೀಕರ ರಸ್ತೆ ಅಪಘಾತ: ಬೆಳಗಾವಿಯ ಇಬ್ಬರು ಯುವಕರ ಸಾವು - ಬೆಳಗಾವಿ ಬೈಕ್​ ಅಪಘಾತ

ಬೆಳಗಾವಿಯಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ.

two-youths-dead-in-accident
ಪಾರ್ಟಿ ಮುಗಿಸಿ ಹಿಂತಿರುವಾಗ ಭೀಕರ ರಸ್ತೆ ಅಪಘಾತ

By

Published : Sep 9, 2021, 9:45 AM IST

ಬೆಳಗಾವಿ:ಪಾರ್ಟಿ ಮುಗಿಸಿ ತಡರಾತ್ರಿ ಮನೆಗೆ ಮರಳುತ್ತಿದ್ದ ಇಬ್ಬರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಹೊರವಲಯದಲ್ಲಿ ಸಂಭವಿಸಿದೆ.

ಬೆಳಗಾವಿಯ ಚವಾಟ್ ಗಲ್ಲಿಯ ಶ್ರೀನಾಥ ಪವಾರ್ (21) ಹಾಗೂ ಸದಾಶಿವ ನಗರದ ನಿವಾಸಿ ರಚಿತ್ ಡುಮಾವತ್ (21) ಅಪಘಾತದಲ್ಲಿ ಮೃತಪಟ್ಟ ಯುವಕರು. ಇಲ್ಲಿನ ಕೆಎಲ್ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಯುವಕರು ರಾತ್ರಿ ಪಾರ್ಟಿ ಮಾಡಲೆಂದು ಕಾಕತಿ ಬಳಿಯ ಢಾಬಾಗೆ ತೆರಳಿದ್ದರು.

ಪಾರ್ಟಿ ಮುಗಿಸಿ ಪುಣೆ-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ನಗರಕ್ಕೆ ಬೈಕ್​ನಲ್ಲಿ ಬರುತ್ತಿದ್ದರು. ಆಗ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಬೈಕ್ ರಭಸವಾಗಿ ಗುದ್ದಿದ್ದು, ಸವಾರಿಬ್ಬರು ಸ್ಥಳದಲ್ಲೇ ಮೃತರಾಗಿದ್ದಾರೆ. ಬೆಳಗಾವಿಯ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳಲು 2ನೇ ಮಹಡಿಯಿಂದ ಹಾರಿದ್ದ ಬಿಜೆಪಿ ಮುಖಂಡನ ಪತ್ನಿ ಸಾವು

ABOUT THE AUTHOR

...view details