ಕರ್ನಾಟಕ

karnataka

ETV Bharat / state

ಬೆಳಗಾವಿ: ಅಡ್ಡಾದಿಡ್ಡಿ ಕಾರು ಓಡಿಸಿದ ಬಿಜೆಪಿ ಮುಖಂಡ, ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು - ಬಿಜೆಪಿ ಮುಖಂಡ ಯುವರಾಜ ಜಾಧವ್

ಬಿಜೆಪಿ ಮುಖಂಡ ಯುವರಾಜ ಜಾಧವ್ ಅಡ್ಡಾದಿಡ್ಡಿ ಕಾರು ಚಲಾಯಿಸಿದ ಪರಿಣಾಮ ವಾಕಿಂಗ್‌ಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ಕಾರು ಹರಿದು ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು ಮತ್ತೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Bjp leader car hits to women and spot death, ಬಿಜೆಪಿ ಮುಖಂಡನ ಕಾರು ಡಿಕ್ಕಿ ಇಬ್ಬರು ಮಹಿಳೆಯರು ಸಾವು
ಬಿಜೆಪಿ ಮುಖಂಡನ ಅಡ್ಡಾದಿಡ್ಡಿ ಕಾರು ಚಾಲನೆಯಿಂದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು

By

Published : May 25, 2020, 12:19 PM IST

ಬೆಳಗಾವಿ: ಬಿಜೆಪಿ ಮುಖಂಡನ ನಿರ್ಲಕ್ಷ್ಯತನಕ್ಕೆ ವಾಯುವಿಹಾರಕ್ಕೆ ತೆರಳಿದ್ದ ಇಬ್ಬರು ಮಹಿಳೆಯರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ನಡೆದಿದೆ.

ಬಿಜೆಪಿ ಮುಖಂಡನ ಅಡ್ಡಾದಿಡ್ಡಿ ಕಾರು ಚಾಲನೆಯಿಂದ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು

ಮುತಗಾ ಗ್ರಾಮದ ಸವಿತಾ ಪಾಟೀಲ್ (44), ವಿದ್ಯಾ ಪಾಟೀಲ್(52) ಮೃತರು. ನಿನ್ನೆ ರಾತ್ರಿ ಊಟ ಮುಗಿಸಿ ವಾಕಿಂಗ್‌ಗೆ ಹೋಗುತ್ತಿದ್ದ ಮಹಿಳೆಯರ ಮೇಲೆ ಕಾರು ಹರಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಶಾಂತಾ ಚೌಗುಲೆ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ‌ತಾಲೂಕಿನ ಬಾಳೆಕುಂದ್ರಿ ಕೆ.ಎಚ್. ಗ್ರಾಮದ ಬಿಜೆಪಿ ಮುಖಂಡ ಯುವರಾಜ ಜಾಧವ್ ಅಡ್ಡಾದಿಡ್ಡಿ ಕಾರು ಚಲಾಯಿಸಿ ಮಹಿಳೆಯರ ಮೇಲೆ ಕಾರು ಹರಿಸಿದ್ದಾನೆ. ಪ್ರಕರಣ ಸಂಬಂಧ ಮಾರಿಹಾಳ ಠಾಣೆ ಪೊಲೀಸರು ‌ಬೆಳಗಾವಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಮಾಜಿ ಅಧ್ಯಕ್ಷ ಯುವರಾಜ್ ಜಾಧವ್​​ನನ್ನು ಬಂಧಿಸಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details