ಬೆಳಗಾವಿ: ಕೊರೊನಾಗೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಸೋಂಕಿಗೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಕಿಲ್ಲರ್ ಕೊರೊನಾಗೆ ಬೆಳಗಾವಿಯಲ್ಲಿ ಇಬ್ಬರು ಮಹಿಳೆಯರು ಬಲಿ...! - ಬೆಳಗಾವಿ ಕೊರೊನಾ ಅಪ್ಡೇಟ್
ಬೆಳಗಾವಿಯಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿಯಾಗಿದ್ದಾರೆ. 61 ವರ್ಷದ ವೃದ್ಧೆ ಹಾಗೂ ಹುಕ್ಕೇರಿ ತಾಲೂಕಿನ 44 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟಿದ್ದಾರೆ.
ಕೊರೊನಾಗೆ ಬೆಳಗಾವಿಯಲ್ಲಿ ಇಬ್ಬರು ಮಹಿಳೆಯರು ಬಲಿ
ಜಿಲ್ಲೆಯ ಅಥಣಿ ತಾಲೂಕಿನ 61 ವರ್ಷದ ವೃದ್ಧೆ ಹಾಗೂ ಹುಕ್ಕೇರಿ ತಾಲೂಕಿನ 44 ವರ್ಷ ವಯಸ್ಸಿನ ಮಹಿಳೆ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇಬ್ಬರಲ್ಲಿ ಕೊರೊನಾ ಲಕ್ಷ್ಮಣಗಳಿದ್ದ ಕಾರಣ ಕೋವಿಡ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ.
ಈ ಇಬ್ಬರ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಈ ವೇಳೆ ಕೊರೊನಾ ಇರುವುದು ದೃಢಪಟ್ಟಿದೆ.