ಕರ್ನಾಟಕ

karnataka

ETV Bharat / state

ಪೆರೋಲ್ ಮೇಲೆ ಹೋಗಿದ್ದ ಹಿಂಡಲಗಾ ಜೈಲಿನ ಇಬ್ಬರು ಕೈದಿಗಳು ಪರಾರಿ - Hindalaga jail Prisoners escape news

ಮೇ 15 ರಿಂದ ಆಗಸ್ಟ್ 16ರವರೆಗೆ ಒಟ್ಟು 90 ದಿನಗಳ ಪೆರೋಲ್ ರಜೆ ಮೇಲೆ ತೆರಳಿದ್ದ ಹಿಂಡಲಗಾ ಕೇಂದ್ರ ಕಾರಾಗೃಹದ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Two Prisoners
ಕೈದಿ

By

Published : Aug 27, 2021, 6:41 AM IST

ಬೆಳಗಾವಿ: ಪೆರೋಲ್ ಮೇಲೆ ತೆರಳಿದ್ದ ಹಿಂಡಲಗಾ ಕೇಂದ್ರ ಕಾರಾಗೃಹದ ಇಬ್ಬರು ಕೈದಿಗಳು ಪರಾರಿಯಾಗಿದ್ದಾರೆ‌.

ತುಮಕೂರು ಮೂಲದ ರಮೇಶ್​ ಕುರಿ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಚಿಕ್ಕನಿಂದಿ ಗ್ರಾಮದ ಈಶ್ವರ ವಗ್ಗರ ತಲೆಮರೆಸಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ರಮೇಶ್ ಕುರಿಗೆ ಮೇ 15 ರಿಂದ ಆಗಸ್ಟ್ 16ರವರೆಗೆ ಒಟ್ಟು 90 ದಿನಗಳ ಪೆರೋಲ್ ರಜೆ ನೀಡಲಾಗಿತ್ತು. ಆದರೆ ನಿಗದಿತ ಸಮಯದೊಳಗೆ ಜೈಲಿಗೆ ವಾಪಸಾಗದೇ ತಲೆಮರೆಸಿಕೊಂಡಿದ್ದಾನೆ.

ಇನ್ನು ಈಶ್ವರ ವಗ್ಗರ (57) ಕೂಡ ಮೇ 15ರಿಂದ ಆಗಸ್ಟ್ 16ರ ವರೆಗೆ 90 ದಿನಗಳ ಕಾಲ ಪೆರೋಲ್ ರಜೆ ಪಡೆದಿದ್ದ. ಈತ ಕೂಡ ನಿಗದಿತ ಸಮಯದಲ್ಲಿ ಜೈಲು ಸೇರದೆ ಪರಾರಿಯಾಗಿದ್ದಾನೆ.

ಈ ಇಬ್ಬರು ಕೈದಿಗಳ ವಿರುದ್ಧ ಹಿಂಡಲಗಾ ಜೈಲು ಸಿಬ್ಬಂದಿ ಬೆಳಗಾವಿ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details