ಬೆಳಗಾವಿ: ಕರ್ತವ್ಯದ ವೇಳೆ ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದ್ದು, 112 ಪೆಟ್ರೋಲಿಂಗ್ ವಾಹನದಲ್ಲಿ ಎಣ್ಣೆ, ಮಾಂಸದೂಟ ಮಾಡಿದ್ದ ಸಿಬ್ಬಂದಿ ಎಚ್.ಎಮ್. ಕಮತೆ ಮತ್ತು ದುಮಾಳ ಅವರನ್ನು ಎಸ್ಪಿ ಅಮಾನತು ಮಾಡಿದ್ದಾರೆ.
ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು: ಬೆಳಗಾವಿ ಎಸ್ಪಿ ಆದೇಶ - Two police personnel
Two police personnel suspended: ಕರ್ತವ್ಯದ ವೇಳೆ ಎಣ್ಣೆ ಪಾರ್ಟಿ ಮಾಡಿದ್ದ ಇಬ್ಬರು ಸಿಬ್ಬಂದಿಯನ್ನು ಎಸ್ಪಿ ಅಮಾನತು ಮಾಡಿದ್ದಾರೆ.
Published : Nov 23, 2023, 3:10 PM IST
|Updated : Nov 23, 2023, 5:01 PM IST
ಈ ಕುರಿತು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಎಸ್ಪಿ ಡಾ. ಭೀಮಾಶಂಕರ ಗುಳೇದ ಅವರು, ಖಡಕಲಾಟ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಊಟ ಮಾಡುವ ನೆಪದಲ್ಲಿ ಸಾರಾಯಿ ಸೇವನೆ ಮಾಡಿರುವುದು ನನ್ನ ಬಗ್ಗೆ ಗಮನಕ್ಕೆ ಬಂದ ತಕ್ಷಣ ಶಿಸ್ತು ಕ್ರಮಕ್ಕೆ ಆದೇಶ ಮಾಡಿದ್ದೇನೆ. ಆ ಬಳಿಕ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದೇನೆ. ಅಲ್ಲದೇ ಇಬ್ಬರು ಪೊಲೀಸ್ ಸಿಬ್ಬಂದಿ ಮೇಲೆ ನಿಗಾ ಇಡಲು ವಿಫಲವಾಗಿದ್ದರಿಂದ ಚಿಕ್ಕೋಡಿ ಮತ್ತು ಖಡಕಲಾಟ್ ಎರಡು ಠಾಣೆ ಪಿಎಸ್ಐಗೆ ಶೋಕಾಸ್ ನೋಟಿಸ್ ನೀಡಿದ್ದೇನೆ. ಚಿಕ್ಕೋಡಿ ಡಿಎಸ್ಪಿಗೂ ಪ್ರಕರಣದ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಿದ್ದೇನೆ ಎಂದರು.
ಇದನ್ನೂ ಓದಿ:ಕೆಇಎ ನೇಮಕಾತಿ ಪರೀಕ್ಷೆ ಅಕ್ರಮದ ರೂವಾರಿ ಬಂಧನಕ್ಕೆ ತೆರಳಲು ತಡ ಮಾಡಿದ ಸಿಪಿಐ ಅಮಾನತು