ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಮತ್ತಿಬ್ಬರಿಗೆ ಕೊರೊನಾ: ಜಿಲ್ಲೆಯಲ್ಲಿ 116ಕ್ಕೇರಿದ ಸೋಂಕಿತರ ಸಂಖ್ಯೆ - belgavi latest news

ಬೆಳಗಾವಿ ಜಿಲ್ಲೆಯ ಯುವಕ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿರುವ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

two more possitive cases in belgavi
ಬೆಳಗಾವಿಯಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು

By

Published : May 18, 2020, 2:02 PM IST

ಬೆಳಗಾವಿ:ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ 23 ವರ್ಷದ ಯುವಕ ಹಾಗೂ ಮುಂಬೈನಿಂದ ‌ಮರಳಿದ್ದ 23 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 116ಕ್ಕೆ ಏರಿಕೆಯಾಗಿದೆ.

ದೆಹಲಿಯ ಧರ್ಮ ಸಭೆಯಲ್ಲಿ ಪಾಲ್ಗೊಂಡು ಬಂದಿದ್ದ 570ನೇ ಸೋಂಕಿತ ಮಹಿಳೆ ಜೊತೆಗೆ ದ್ವಿತೀಯ ಸಂಪರ್ಕ ಹೊಂದಿದ್ದ ಕುಡಚಿ ಪಟ್ಟಣದ 23 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದ ಮುಂಬೈನಿಂದ ವಾಪಸ್ ಆಗಿದ್ದ 23 ವರ್ಷದ ಮಹಿಳೆಗೂ ಸೋಂಕು ತಗುಲಿದೆ. ಮುಂಬೈನ ಮಾತುಂಗಾ ರಸ್ತೆ ಬದಿಯ ಬಡಾವಣೆಯಲ್ಲಿ ಕುಟುಂಬದ ಜೊತೆ ಮಹಿಳೆ ವಾಸವಿದ್ದರು. ಮೇ 12ರಂದು ಪತಿ ಹಾಗೂ ಮಗಳ ಜೊತೆ ಕೊಗನೊಳ್ಳಿ ಚೆಕ್‌ ಪೋಸ್ಟ್ ಮೂಲಕ ರಾಜ್ಯ ಪ್ರವೇಶಿಸಿದ್ದರು. ಮೂವರನ್ನು ನಿಪ್ಪಾಣಿಯ ಲಾಡ್ಜ್‌ನಲ್ಲಿ ಕ್ವಾರಂಟೈನ್​ ಮಾಡಲಾಗಿತ್ತು. ಇದೀಗ ಮಹಿಳೆಗೆ ಸೋಂಕು ದೃಢಪಟ್ಟಿದೆ.

ABOUT THE AUTHOR

...view details