ಬೆಳಗಾವಿ:ಚಲಿಸುತ್ತಿದ್ದ ಟ್ರ್ಯಾಕ್ಟರ್ನ ಟ್ರಾಲಿ ಬೇರ್ಪಟ್ಟು ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಸಮೀಪ ಸಂಭವಿಸಿದೆ. ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ.
ಟ್ರ್ಯಾಕ್ಟರ್ ಟ್ರಾಲಿ ಬೇರ್ಪಟ್ಟು ಅವಘಡ: ಬಾಲಕ ಸೇರಿ ಇಬ್ಬರ ದುರ್ಮರಣ - ಬೆಳಗಾವಿ ಟ್ರ್ಯಾಕ್ಟರ್ ಅಪಘಾತ ಸುದ್ದಿ
ಚಲಿಸುತ್ತಿದ್ದ ಟ್ರ್ಯಾಕ್ಟರ್ನ ಟ್ರಾಲಿ ಬೇರ್ಪಟ್ಟು ಪಲ್ಟಿಯಾಗಿ ಬಾಲಕ ಸೇರಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಸಮೀಪ ಸಂಭವಿಸಿದೆ.
ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದ ಕರಿಯಪ್ಪ ನಂದಿ (66) ಹಾಗೂ ಸಂತೋಷ ಮದಲೂರು (17) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಾಯಪ್ಪ ಮರೆನ್ನವರ (40), ಟ್ರ‍್ಯಾಕ್ಟರ್ ಚಾಲಕ ರುದ್ರಪ್ಪ ನಾಗನೂರ (32) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಲಹೊಂಗಲ ಎಪಿಎಂಸಿಗೆ ಹತ್ತಿ ಮಾರಾಟ ಮಾಡಿ, ಸಿಮೆಂಟ್ ಇಟ್ಟಿಗೆಗಳನ್ನು ಟ್ರಾಲಿಯಲ್ಲಿ ಹಾಕಿಕೊಂಡು ವಾಪಸ್ಸಾಗುತ್ತಿದ್ದರು. ಬೈಲವಾಡ ಸಮೀಪ ಟ್ರ್ಯಾಕ್ಟರ್ನಿಂದ ಟ್ರಾಲಿ ಬೇರ್ಪಟ್ಟು, ಅದರಲ್ಲಿ ಕುಳಿತಿದ್ದ ಕರಿಯಪ್ಪ ಹಾಗೂ ಸಂತೋಷ ಮೇಲೆ ಇಟ್ಟಿಗೆ ಬಿದ್ದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.