ಕರ್ನಾಟಕ

karnataka

ETV Bharat / state

ಮೂಡಲಗಿ ಬಳಿ ಕಾರು ಅಪಘಾತ: ಯುವಕರಿಬ್ಬರು ಸ್ಥಳದಲ್ಲೇ ಸಾವು - ಮೂಡಲಗಿ ಕಾರು ಡಿಕ್ಕಿ

ಬೆಳಗಾವಿ ಜಿಲ್ಲೆಯ ಗುರ್ಲಾಪೂರ ಕ್ರಾಸ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

two killed in car accident near mudalagi
ಮೂಡಲಗಿ ಬಳಿ ಕಾರು ಅಪಘಾತ: ಯುವಕರಿಬ್ಬರು ಸ್ಥಳದಲ್ಲೇ ಸಾವು

By

Published : Sep 12, 2021, 1:08 PM IST

ಚಿಕ್ಕೋಡಿ(ಬೆಳಗಾವಿ): ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿಯಾಗಿ ಯುವಕರಿಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಸಂಭವಿಸಿದೆ.

ವಿನಾಯಕ‌ ಚಿದಾನಂದ ಕಾವೇರಿ (22) ಹಾಗೂ ಮುತ್ತು ಮಾಳಿ (22) ಸಾವನ್ನಪ್ಪಿರುವ ಯುವಕರಾಗಿದ್ದಾರೆ. ಧಾರವಾಡದಿಂದ ಅಥಣಿಗೆ ತೆರಳುತ್ತಿದ್ದ ವೇಳೆ ಮೂಡಲಗಿಯ ಗುರ್ಲಾಪೂರ ಕ್ರಾಸ್ ಬಳಿ ಅಪಘಾತವಾಗಿದೆ. ಈರಯ್ಯ ಹಿರೇಮಠ (22) ಎಂಬಾತ ತೀವ್ರ ಗಾಯಗೊಂಡಿದ್ದು, ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾದ ಕಾರು

ಈರಯ್ಯ ಅವರ ತಾಯಿಯನ್ನು ಧಾರವಾಡಕ್ಕೆ ಬಿಟ್ಟು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಹಾರೋಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಅಮೆರಿಕದ ಯುದ್ಧ ವಿಮಾನಕ್ಕೆ ಜೋಕಾಲಿ ಕಟ್ಟಿ ಆಟವಾಡಿದ ತಾಲಿಬಾನಿಗಳು- Video Viral

ABOUT THE AUTHOR

...view details