ಕರ್ನಾಟಕ

karnataka

ETV Bharat / state

ಕಬ್ಬಿನ ಬೆಳೆಯಲ್ಲಿ ಗಾಂಜಾ ಬೆಳೆದ ಆರೋಪ: ಇಬ್ಬರು ರೈತರ ಬಂಧನ - Chikkodi two Farmers arrest news

ಸ್ವಂತ ಜಮೀನಿನಲ್ಲಿ 120 ಕೆ.ಜಿ ಗಾಂಜಾ ಬೆಳೆದ ಇಬ್ಬರು ರೈತರನ್ನು ಕುಡಚಿ ಪೊಲೀಸರು ಬಂಧಿಸಿದ್ದಾರೆ.

Arrest
Arrest

By

Published : Sep 5, 2020, 4:20 PM IST

ಚಿಕ್ಕೋಡಿ: ಸ್ವಂತ ಲಾಭಕ್ಕಾಗಿ ಕಬ್ಬಿನ ಬೆಳೆಯಲ್ಲಿ ಗಾಂಜಾ ಬೆಳೆದ ರೈತರು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ.

ಸುಟ್ಟಟ್ಟಿ ಗ್ರಾಮದ ರೈತ ಲಕ್ಕಪ್ಪ ಸತ್ಯಪ್ಪ ಖೋತ (60) ಹಾಗೂ ಲಕ್ಷ್ಮಣ ಲಕ್ಕಪ್ಪ ಖೋತ (35) ಬಂಧಿತ ಆರೋಪಿಗಳು. ಇವರು ಜಮೀನಿನಲ್ಲಿ 120 ಕೆ.ಜಿ ಸುಮಾರು 1,20,000 ರೂಪಾಯಿ ಮೌಲ್ಯದ ಗಾಂಜಾ ಬೆಳೆಯನ್ನು ಬೆಳೆದಿದ್ದು, ಪೊಲೀಸರು ಗಾಂಜಾ ಜಪ್ತಿ ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details