ಬೆಳಗಾವಿ: ಘಟಪ್ರಭಾ ಎಡದಂಡೆ ಕಾಲುವೆಗೆ ಆಕಸ್ಮಿಕವಾಗಿ ಬಿದ್ದು ಇಬ್ಬರು ವ್ಯಕ್ತಿಗಳು ಮೃತಪಟ್ಟ ಘಟನೆ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಹುಬ್ಬರವಾಡಿ ಗ್ರಾಮದ ಡೈರಿ ವಾಹನ ಚಾಲಕ ಅಶೋಕ ಶ್ರೀಶೈಲ ಡಬ್ಬನ್ನವರ (26) ಹಾಗೂ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮದ ಕ್ಲೀನರ್ ನಾಗಪ್ಪ ಕಾಡಪ್ಪ ಅಂಗಡಿ (38) ಮೃತ ದುರ್ದೈವಿಗಳು.
ಘಟಪ್ರಭಾ ಎಡದಂಡೆ ಕಾಲುವೆಗೆ ಬಿದ್ದ ಇಬ್ಬರು ಸಾವು ಮೃತರು ಕಾಲುವೆಯ ಪಕ್ಕದಲ್ಲಿ ಖಾಸಗಿ ಹಾಲಿನ ಡೈರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹಾಲಿನ ವಾಹನ ಚಾಲಕ ನೀರು ತರಲು ಹೋಗಿ ಕಾಲುವೆಗೆ ಜಾರಿ ಬಿದ್ದಿದ್ದಾನೆ. ಚಾಲಕನನ್ನು ಹಿಡಿಯಲು ಹೋದ ಕ್ಲೀನರ್ ಕೂಡಾ ಬಿದ್ದಿದ್ದಾನೆ. ಕ್ಲೀನರ್ ನಾಗಪ್ಪ ಅವರ ದೇಹ ಪತ್ತೆಯಾಗಿದ್ದು, ಚಾಲಕ ಅಶೋಕ್ ಮೃತದೇಹಕ್ಕಾಗಿ ಕಾರ್ಯಾಚರಣೆ ನಡೆಯುತ್ತಿದೆ.
ಇತ್ತ ಘಟನಾ ಸ್ಥಳಕ್ಕೆ ಘಟಪ್ರಭಾ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.