ಕರ್ನಾಟಕ

karnataka

ETV Bharat / state

ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದು ದುರ್ಘಟನೆ: ಇಬ್ಬರ ಸಾವು - Chikkodi news

ಕೃಷ್ಣಾ ನದಿಗೆ ಕಾಲು ಜಾರಿ ಬಿದ್ದು ಇಬ್ಬರು ಅಸುನೀಗಿದ ದುರ್ಘಟನೆ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಸಂಭವಿಸಿದೆ.

ಇಬ್ಬರನ್ನು ಬಲಿ ಪಡೆದ ಕೃಷ್ಣೆ

By

Published : Aug 17, 2019, 4:29 PM IST

ಚಿಕ್ಕೋಡಿ : ನದಿ ಪ್ರವಾಹದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ನೀರು ಪಾಲಾದ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕುಸನಾಳ-ಇಂಗಳಿ ಸಮೀಪ ನಡೆದಿದೆ.

ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ಅಪ್ಪಾಸಾಬ ಸಮಾಜ (28) ಹಾಗೂ ಶಾಂತಿನಾಥ ವಸಂತ ಸಮಾಜ (25) ಮೃತರು.

ಕೃಷ್ಣಾ ನದಿಗೆ ಪ್ರವಾಹ ಬಂದಿದ್ದು ಇದೀಗ ನೀರಿನ ಮಟ್ಟದಲ್ಲಿ ಇಳಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕುಸನಾಳ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಬಂದಿರುವ ಅವರು ನದಿ ಬಳಿಗೆ ತೆರಳಿದ್ದಾರೆ. ಈ ವೇಳೆ ನದಿ ನೀರಿನಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಈಜು ಬರುತ್ತಿದ್ದು ರಕ್ಷಣೆ ಧಾವಿಸಿದಾಗ ಪರಸ್ಪರ ತಬ್ಬಿಕೊಂಡು ಇಬ್ಬರೂ ಮೃತಪಟ್ಟಿದ್ದಾರೆ.

ಕಾಗವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details