ಬೆಳಗಾವಿ: ಭೀಕರ ಪ್ರವಾಹದಿಂದ ಶಾಂತವಾಗಿರುವ ಮಲಪ್ರಭಾ ನದಿಯಲ್ಲಿ ಮತ್ತೊಂದು ಸಮಸ್ಯೆ ಉದ್ಭವವಾಗಿದೆ. ಮಳೆಯ ನೀರಿನಲ್ಲಿ ನದಿಗೆ ಎರಡು ಮೊಸಳೆಗಳು ತೇಲಿ ಬಂದಿದ್ದು ಕೊಣ್ಣೂರ ಗ್ರಾಮದ ಜನರನ್ನು ಮತ್ತಷ್ಟು ಆತಂಕಕ್ಕೆ ಒಡ್ಡಿದೆ.
ಮಲಪ್ರಭಾ ನದಿಯಲ್ಲಿ ಕಂಡ ಎರಡೆರಡು ಮೊಸಳೆ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ! - ಮಲಪ್ರಭಾ ನದಿಯಲ್ಲಿ ಎರಡು ಮೊಸಳೆ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಹರಿಯುವ ಮಲಪ್ರಭಾ ನದಿಯಲ್ಲಿ ಎರಡು ಮೊಸಳೆಗಳು ಕಾಣಿಸಿಕೊಂಡಿವೆ. ಇದರಿಂದ ನದಿ ಪಾತ್ರದ ಜನರಲ್ಲಿ ಆತಂಕ ಉಂಟಾಗಿದೆ.
ಮಲಪ್ರಭಾ ನದಿಯಲ್ಲಿ ಎರಡು ಮೊಸಳೆ
ಈಗಷ್ಟೇ ಪ್ರವಾಹ ಎದುರಿಸಿದ್ದ ಜನರು ಸಧ್ಯ ಮೊಸಳೆಯ ತೊಂದರೆಗೆ ಒಳಗಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾಗಳು ಭೇಟಿ ನೀಡಿದ್ದು, ಬಿಸಿಲಿನ ತಾಪ ಕಡಿಮೆಯಾದ ನಂತರ ಮೊಸಳೆ ಹಿಡಿಯುವುದಾಗಿ ತಿಳಿಸಿದ್ದಾರೆ.
Last Updated : Oct 17, 2019, 6:24 AM IST