ಕರ್ನಾಟಕ

karnataka

ETV Bharat / state

ವಿಷಾಹಾರ ಸೇವಿಸಿ ಇಬ್ಬರು ಮಕ್ಕಳ ದಾರುಣ ಸಾವು: ತಾಯಿ ಸ್ಥಿತಿ ಗಂಭೀರ - ವಿಷಾಹಾರ ಸೇವನೆ ಇಬ್ಬರು ಮಕ್ಕಳ ದಾರುಣ ಸಾವು

ವಿಷಾಹಾರ ಸೇವಿಸಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ತಾಯಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

ವಿಷಾಹಾರ ಸೇವಿಸಿ ಇಬ್ಬರು ಮಕ್ಕಳ ದಾರುಣ ಸಾವು

By

Published : Oct 30, 2019, 1:26 PM IST

ಚಿಕ್ಕೋಡಿ: ವಿಷಾಹಾರ ಸೇವಿಸಿ ಇಬ್ಬರು ಮಕ್ಕಳು ಸಾವನಪ್ಪಿದ್ದು, ತಾಯಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

ಮೃತ ಬಾಲಕಿಯರು

ಚಿಂಚಲಿ ಗ್ರಾಮದ ಯೋಧ ಹನುಮಂತ ಕುಂಬಾರ ಗುವಾಹಟಿಯಲ್ಲಿ ಯೋಧನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಹನುಮಂತ ಕುಂಬಾರ ಮಕ್ಕಳಾದ ಐಶ್ವರ್ಯ ಕುಂಬಾರ (4) ಮತ್ತು ಜಯಶ್ರೀ ಕುಂಬಾರ(6) ಸ್ಥಳದಲ್ಲೇ ಸಾವನಪ್ಪಿದ್ದು, ತೀವ್ರವಾಗಿ ಅಸ್ವಸ್ಥಗೊಂಡ ಯೋಧ ಹನುಮಂತ ಪತ್ನಿ ಕವಿತಾ ಕುಂಬಾರರನನ್ನು ಸ್ಥಳೀಯ ಖಾಸಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಳಿನ ವ್ಯಾಪಾರಕ್ಕೆ ತಂದಿಟ್ಟ ಕ್ರಿಮಿನಾಶಕ ಲೇಪಿತ ಕಾಳು ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ABOUT THE AUTHOR

...view details