ಕರ್ನಾಟಕ

karnataka

ETV Bharat / state

ಚಿಕ್ಕೋಡಿ: ಇಬ್ಬರು ಖತರ್ನಾಕ್ ಸರಗಳ್ಳರ ಬಂಧನ - Chikkodi two theft arrest news

ಇಬ್ಬರು ಸರಗಳ್ಳರನ್ನು ಮೂಡಲಗಿ ಠಾಣೆ ಪೊಲೀಸರು ಬಂಧಿಸಿ, 1.25 ಲಕ್ಷ ಮೌಲ್ಯದ ಬಂಗಾರ ಸರ ಹಾಗೂ 70 ಸಾವಿರ ಮೌಲ್ಯದ ಪಲ್ಸರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

Arrest
Arrest

By

Published : Sep 19, 2020, 2:53 PM IST

ಚಿಕ್ಕೋಡಿ: ಬೈಕ್ ನಲ್ಲಿ ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದ ಅಮೀತ ರಾಮದಾಸ ಸಿದ್ರಾಮಗೋಳ (20) ಹಾಗೂ ಮಹಾಲಿಂಗಪೂರ ತಾಲೂಕಿನ ಮಾರಾಪೂರ ಗ್ರಾಮದ ಆನಂದ ಮೇತ್ರೆ (23) ಬಂಧಿತ ಆರೋಪಿಗಳು.

ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ರಾಜಶ್ರೀ ಬೆಣಚಿನಮರಡಿ ಎಂಬ ಮಹಿಳೆ ಸೆ.13 ರಂದು ತನ್ನ ಪತಿಯೊಂದಿಗೆ ಮೂಡಲಗಿ ತಾಲೂಕಿನ ಮಸಗುಪ್ಪಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಮಹಿಳೆಯ ಕೊರಳಲ್ಲಿರುವ ಸುಮಾರು 1.25 ಲಕ್ಷ ಮೌಲ್ಯದ ಸರವನ್ನು ಇಬ್ಬರು ಖದೀಮರು ಬೈಕ್ ಮೇಲೆ ಬಂದು ಕಿತ್ತುಕೊಂಡು ಪರಾರಿಯಾಗಿದ್ದರು.

ಇನ್ನು ಬಂಧಿತರಿಂದ 1.25 ಲಕ್ಷ ಮೌಲ್ಯದ ಬಂಗಾರ ಸರ ಹಾಗೂ 70 ಸಾವಿರ ಮೌಲ್ಯದ ಪಲ್ಸರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details