ಬೆಳಗಾವಿ:ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಬಾಲಕರು ಇಂದು ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆ ಆಗಿರುವ ಘಟನೆ ನಡೆದಿದೆ. ಜಿಲ್ಲೆಯ ಖಾನಾಪೂರ ಪಟ್ಟಣದ ದುರ್ಗಾನಗರದ ಶ್ರೇಯಸ್ ಮಹೇಶ್ ಬಾಪಶೇಟ್ (13) ಹಾಗೂ ರೋಹಿತ್ ಅರುಣ್ ಪಾಟೀಲ (15) ಮೃತ ಬಾಲಕರು.
2 ದಿನಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಬಾಲಕರು ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆ! - Belgavi
ಕಳೆದ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಬಾಲಕರು ಇಂದು ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಶ್ರೇಯಸ್ ಮಹೇಶ್ ಬಾಪಶೇಟ್ ಹಾಗೂ ರೋಹಿತ್ ಅರುಣ್ ಪಾಟೀಲ
ಕಾಣೆಯಾಗಿದ್ದ ಈ ಇಬ್ಬರು ಬಾಲಕರು ಸೇರಿ ಐದಾರು ಮಂದಿ ಸ್ನೇಹಿತರು ಜೊತೆಗೂಡಿ ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದರು. ಆದರೆ ಸರಿಯಾಗಿ ಈಜಲು ಬಾರದ ಕಾರಣ ಇಬ್ಬರು ಬಾಲಕರು ನೀರು ಪಾಲಾಗಿದ್ದರು. ಇಂದು ಬಾಲಕರ ಮೃತದೇಹ ಪತ್ತೆಯಾಗಿದ್ದು, ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಪೊಲೀಸ್ ನೌಕರಿಯ ನೇಮಕಾತಿ ಪತ್ರಕ್ಕೆ ಕಾಯುತ್ತಿದ್ದ ಯುವಕ ನೇಣಿಗೆ ಶರಣು