ಕರ್ನಾಟಕ

karnataka

ETV Bharat / state

ಲಾಕ್​​ಡೌನ್​ ಸಮಯದಲ್ಲಿ ತಿರುಗಾಡಲು ನಕಲಿ ಐಡಿ ಕಾರ್ಡ್​ ಮಾಡಿಕೊಡುತ್ತಿದ್ದವರ ಬಂಧನ - ಬೆಳಗಾವಿಯಲ್ಲಿ ನಕಲಿ ಐಡಿ ಕಾರ್ಡ್ ಮಾಡಿಕೊಡುತ್ತಿದ್ದವರ ಬಂಧನ

ಸರ್ಕಾರ ರಂಗೋಲಿ ಕೆಳಗೆ ತೂರಿದ್ರೆ , ಕೆಲವೊಂದಿಷ್ಟು ಜನ ಚಾಪೆ ಕೆಳಗೆ ತೂರುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಲಾಕ್​ಡೌನ್ ಅವಧಿಯಲ್ಲಿ ಪೊಲೀಸರನ್ನೇ ಮಂಗ ಮಾಡಿ ರಾಜಾರೋಷವಾಗಿ ತಿರುಗಾಡಲು ಜನರಿಗೆ ನಕಲಿ ಐಡಿ ಕಾರ್ಡ್ ಮಾಡಿಕೊಡುತ್ತಿದ್ದ ಚಾಲಾಕಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

two arrested for making fake ID cards
ನಕಲಿ ಐಡಿ ಕಾರ್ಡ್​ ಮಾಡಿಕೊಡುತ್ತಿದ್ದವರ ಬಂಧನ

By

Published : May 11, 2021, 10:40 AM IST

ಬೆಳಗಾವಿ:ಲಾಕ್​ಡೌನ್ಸಮಯದಲ್ಲಿ ಅನಗತ್ಯವಾಗಿ ಓಡಾಡುವ ಜನರಿಗೆ ನಕಲಿ ಐಡಿ ಕಾರ್ಡ್ ತಯಾರಿಸಿ ಕೊಡುತ್ತಿದ್ದ ಅಂಗಡಿ ಮೇಲೆ ದಾಳಿ ನಡೆಸಿದ ಡಿಸಿಪಿ ವಿಕ್ರಮ ಆಮಟೆ ನೇತೃತ್ವದ ಖಡೇಬಜಾರ್ ಪೊಲೀಸರ ತಂಡ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದ ಕಡೋಲ್ಕರ್ ಗಲ್ಲಿಯ ಮುಚ್ಚಂಡಿ ಪ್ರಿಂಟರ್ಸ್ ಮಾಲೀಕ ವಿಶ್ವನಾಥ ಮುಚ್ಚಂಡಿ (35) ಹಾಗೂ ಭಾತಖಾಂಡೆ ಗಲ್ಲಿಯ ರೋಹಿತ ಸುನೀಲ ಕುಟ್ರೆ (23) ಬಂಧಿತ ಆರೋಪಿಗಳು. ಈ ಇಬ್ಬರು ಲಾಕ್​ಡೌನ್​ ಅವಧಿಯಲ್ಲಿ ಓಡಾಡುವ ಜನರಿಗೆ ವಿವಿಧ ಇಲಾಖೆಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್​ಗಳನ್ನು ಪ್ರಿಂಟ್​ ಮಾಡಿ ಕೊಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಕೈಗೆ ಕೋಳ ತೊಡಿಸಿದ್ದಾರೆ.

ನಕಲಿ ಐಡಿ ಕಾರ್ಡ್​ಗಳು

ಓದಿ : ರೆಮ್ಡಿಸಿವಿರ್​​ ಇಂಜೆಕ್ಷನ್ ಮಾರಾಟ: ಖಾಸಗಿ ಆಸ್ಪತ್ರೆ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕ ಅರೆಸ್ಟ್‌

ಬಂಧಿತರಿಂದ ಸಹಕಾರ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಹೆಸರಿನಲ್ಲಿದ್ದ ನಕಲಿ ಐಡಿಗಳು ಮತ್ತು ಅದಕ್ಕೆ ಬಳಸಲಾಗುತ್ತಿದ್ದ ಕಂಪ್ಯೂಟರ್ ಹಾಗೂ ಪ್ರಿಂಟರ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details