ಬೆಳಗಾವಿ:ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನಕಲಕುವ ಘಟನೆಯೊಂದು ಹೊರಬಿದ್ದಿದೆ.
ಹತ್ತೇ ದಿನದಲ್ಲಿ ಮದುವೆ ನಡೀಬೇಕಿದ್ದ ಮನೆಯಲ್ಲಿ ರಕ್ತದ ಕೋಡಿ... ಬಯಲಾಯ್ತು ತ್ರಿವಳಿ ಕೊಲೆ ಹಿಂದಿನ ರಹಸ್ಯ! - ಬೆಳಗಾವಿಯಲ್ಲಿ ತ್ರಿವಳಿ ಕೊಲೆ
ಕೊಲೆಗೀಡಾದ ಮೂವರೂ ಕೂಡಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮ ಆ ಕುಟುಂಬದಲ್ಲಿರಬೇಕಿತ್ತು. ವಿವಾಹ ಜನವರಿ 30ಕ್ಕೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆ ಸಂಭ್ರಮ ತುಂಬಿದ್ದು ವಿವಾಹ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು, ಸ್ನೇಹಿತರಿಗೆ ಹಂಚಲಾಗುತ್ತಿತ್ತು. ಈ ನಡುವೆ ತ್ರಿವಳಿ ಕೊಲೆಯಾಗಿದ್ದರಿಂದ ಮದುವೆ ಸಂಭ್ರಮಕ್ಕೆ ಆಹ್ವಾನಿಸಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಕೊಲೆಗೀಡಾದ ಮೂವರೂ ಕೂಡಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮ ಆ ಕುಟುಂಬದಲ್ಲಿರಬೇಕಿತ್ತು. ಶಿವಾನಂದ ಹಾಗೂ ಶಾಂತವ್ವ ಎಂಬ ದಂಪತಿ ಪುತ್ರವಿನೋದ ಅಂದಾನಂದ ಶೆಟ್ಟಿ ಎಂಬಾತನ ವಿವಾಹ ಜನವರಿ 30ಕ್ಕೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆ ಸಂಭ್ರಮ ತುಂಬಿದ್ದು ವಿವಾಹ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು, ಸ್ನೇಹಿತರಿಗೆ ಹಂಚಲಾಗುತ್ತಿತ್ತು. ಈ ನಡುವೆ ತ್ರಿವಳಿ ಕೊಲೆಯಾಗಿದ್ದರಿಂದ ಮದುವೆ ಸಂಭ್ರಮಕ್ಕೆ ಆಹ್ವಾನಿಸಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಕೆಲ ತಿಂಗಳುಗಳ ಹಿಂದೆ ಧಾರವಾಡ ಮೂಲದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಉಭಯ ಕುಟುಂಬಗಳು ಮದುವೆಗೆ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಶಾಕ್ ಆಗುವ ದುರ್ಘಟನೆ ನಡೆದಿದೆ. ಶಿವಾನಂದ ಮನೆಯ ಪಕ್ಕದಲ್ಲಿನ ಜಾಗದ ವಿವಾದವೇ ತ್ರಿವಳಿ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಭೂ ವಿವಾದ ತಾರಕಕ್ಕೇರಿದ್ದು, ಆರು ಜನರ ಗುಂಪೊಂದು ಶಿವಾನಂದ ಅಂದಾನಶೆಟ್ಟಿ ಸೇರಿ ಮೂವರನ್ನು ಹತ್ಯೆಗೈದು ಪರಾರಿಯಾಗಿದೆ.ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು ದೊಡ್ಡವಾಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.