ಕರ್ನಾಟಕ

karnataka

ETV Bharat / state

ಜೈಲಿನ ಶೌಚಾಲಯದ ಕಿಟಕಿ ಮುರಿದು ವಿಚಾರಣಾಧೀನ ಕೈದಿಗಳು ಎಸ್ಕೇಪ್​! - Hukkeri Sub Jail

ಮನೆ ಕಳ್ಳತನ ಆರೋಪದಡಿ ಬಂಧಿತರಾಗಿ ಹುಕ್ಕೇರಿಯ ಜೈಲಿನಲ್ಲಿದ್ದ ಇಬ್ಬರು ವಿಚಾರಣಾಧೀನ ಕೈದಿಗಳು ಕಿಟಕಿ ಸರಳುಗಳನ್ನು ಮುರಿದು ಎಸ್ಕೇಪ್​ ಆಗಿದ್ದಾರೆ.

ವಿಚಾರಣಾಧೀನ ಖೈದಿಗಳು ಎಸ್ಕೇಪ್

By

Published : Aug 23, 2019, 7:48 PM IST

ಚಿಕ್ಕೋಡಿ : ಸಬ್ ಜೈಲ್​ನಲ್ಲಿ ಶೌಚಾಲಯದ ಕಿಟಕಿ ಮುರಿದು ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ನಡೆದಿದೆ.

ವಿಚಾರಣಾಧೀನ ಕೈದಿಗಳು ಎಸ್ಕೇಪ್

ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಅನಿಲ್​ ಲಂಬುಗೋಳ ಹಾಗೂ ಗೋಕಾಕ್​ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಕಮತೆಕರ ಪರಾರಿಯಾದವರು. ಮನೆ ಕಳ್ಳತನ ಆರೋಪದಡಿ ಇವರನ್ನು ಬಂಧಿಸಲಾಗಿತ್ತು.

ಹುಕ್ಕೇರಿ ಸಬ್ ಜೈಲ್​ನಲ್ಲಿ ಒಂದೇ ಕೋಣೆಯಲ್ಲಿ 10 ಕೈದಿಗಳನ್ನು ಇರಿಸಲಾಗಿತ್ತು. ಅದರಲ್ಲಿ ಇಬ್ಬರು ಪರಾರಿಯಾಗಿದ್ದು,ಈ ಬಗ್ಗೆ ಉಳಿದವರನ್ನು ವಿಚಾರಿಸಿದರೆ ನಾವು ರಾತ್ರಿ ನಿದ್ದೆಯಲ್ಲಿದ್ದೆವು. ನಮಗೆ ಗೊತ್ತಿಲ್ಲ ಎಂದಿದ್ದಾರೆ. ಘಟನೆ ನಂತರ ಇನ್ನುಳಿದ ಕೈದಿಗಳನ್ನು ಹುಕ್ಕೇರಿ ಸಬ್ ಜೈಲಿನಿಂದ ಗೋಕಾಕ್​ ಜೈಲಿಗೆ ಸ್ಥಳಾಂತರಿಸಲಾಗಿದೆ.

ABOUT THE AUTHOR

...view details