ರೈತ ಸ್ನೇಹಿ ಕೃಷಿ ವಿಮಾನ ಪ್ರಯೋಗ ಚಿಕ್ಕೋಡಿ(ಬೆಳಗಾವಿ): ಇತ್ತೀಚಿನ ದಿನಗಳಲ್ಲಿ ಕೃಷಿಗೆ ಅನುಕೂಲವಾಗುವಂತೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೀಗ ದೆಹಲಿ ಮೂಲದ ಡಾ.ಶಂಕರ್ ಗೋಯಾಂಕ್ ಎನ್ನುವರು ಕೃಷಿ ವಿಮಾನ ಎಂಬ ರೈತ ಸ್ನೇಹಿ ಡ್ರೋನ್ ಅನ್ವೇಷಿಸುವ ಜೊತೆಗೆ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದ ರೈತರಿಗೆ ಇದರ ಉಪಯೋಗದ ಕುರಿತು ಮಾಹಿತಿ ನೀಡಿದರು.
ಡಾ. ಗೋಯಾಂಕ್ ಅವರು ಈಗಾಗಲೇ ಹಲವಾರು ದೇಶಗಳಲ್ಲಿ ಈ ಡ್ರೋನ್ ಕಾರ್ಯಾಚರಣೆ ಕುರಿತು ಉಪನ್ಯಾಸ ನೀಡಿದ್ದಾರೆ. ಇದೀಗ ದಕ್ಷಿಣ ಭಾರತದಲ್ಲಿ ಈ ತಂತ್ರಜ್ಞಾನ ಅಳವಡಿಸಲು ಪ್ರಾಯೋಗಿಕವಾಗಿ ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಜೊತೆ ಕೃಷಿಗೆ ಹೆಚ್ಚು ಅನುಕೂಲಕರವಾಗಲಿದೆ.
ಇದನ್ನೂ ಓದಿ:ಯಾದಗಿರಿಯಲ್ಲಿ 2.5 ಎಕರೆ ಭತ್ತಕ್ಕೆ 2.5 ನಿಮಿಷದಲ್ಲಿ ಔಷಧ ಸಿಂಪಡಿಸಿದ ಡ್ರೋನ್...
ಈ ಕುರಿತು ಮಾಹಿತಿ ನೀಡಿದ ಗೋಯಾಂಕ್, ಪಿಎಂ ನರೇಂದ್ರ ಮೋದಿಯವರು ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಕನಸು ಹೊಂದಿದ್ದಾರೆ. ಅವರ ಕನಸನ್ನೇ ಪ್ರೇರಣೆಯಾಗಿಟ್ಟುಕೊಂಡು ಈ ಡ್ರೋನ್ ತಯಾರು ಮಾಡಲಾಗಿದೆ. ಈಗಾಗಲೇ ಗುಜರಾತ್, ಮಧ್ಯಪ್ರದೇಶ, ಹರಿಯಾಣ ರಾಜ್ಯಗಳಲ್ಲಿ ಕೃಷಿ ವಿಮಾನ ಯಶಸ್ವಿಯಾಗಿದೆ. ಕೃಷಿ ವಿಮಾನದಿಂದ ಸಿಂಪಡಿಸಲ್ಪಡುವ ಔಷಧಿಗಳ ಪ್ರಮಾಣವು ಭೂಮಿಗೆ ಕಡಿಮೆ ತಗಲುತ್ತದೆ. ಇದರಿಂದಾಗಿ ಭೂಮಿಯು ಫಲವತ್ತತೆ ಕಳೆದುಕೊಳ್ಳುವುದಿಲ್ಲ. ಕೃಷಿ ವಿಮಾನದಿಂದ ಒಂದು ದಿನಕ್ಕೆ ಒಬ್ಬ ಕೃಷಿಕ ಎರಡರಿಂದ ಎರಡೂವರೆ ಏಕರೆ ಪ್ರದೇಶಕ್ಕೆ ಔಷಧಿ ಸಿಂಪಡಿಸಬಹುದು ಎಂದು ಮಾಹಿತಿ ನೀಡಿದರು.