ಕರ್ನಾಟಕ

karnataka

ETV Bharat / state

ಅಪರೂಪದ ಕಾಯಿಲೆಗೆ ತುತ್ತಾಗಿರುವ ಶೌರ್ಯ ಹುಲಿಗೆ ಸೂಕ್ತ ಚಿಕಿತ್ಸೆ

ಅಪರೂಪದ ಕಾಯಿಲೆಗೆ ತುತ್ತಾಗಿರುವ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯದಲ್ಲಿರುವ ಶೌರ್ಯ ಎಂಬ ಹುಲಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

By

Published : Jun 3, 2023, 8:58 PM IST

Etv treatment-for-the-tiger-suffering-from-a-rare-disease-in-belagvi
ಅಪರೂಪದ ಕಾಯಿಲೆಗೆ ತುತ್ತಾಗಿರುವ ಶೌರ್ಯ ಹುಲಿಗೆ ಸೂಕ್ತ ಚಿಕಿತ್ಸೆ

ಬೆಳಗಾವಿ: ಜಿಲ್ಲೆಯ ಭೂತರಾಮನಹಟ್ಟಿಯ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯದಲ್ಲಿರುವ ಶೌರ್ಯ ಎಂಬ ಹುಲಿಯು ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದನ್ನು ವನ್ಯಜೀವಿ ವೈದ್ಯ ಡಾ. ಮದನ್ ಪತ್ತೆ ಹಚ್ಚಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹುಲಿಗೆ ಸದ್ಯ ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ವೈದ್ಯರು ಹುಲಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ವನ್ಯಜೀವಿ ವೈದ್ಯರಿಗೆ ಸುಲಭವಾಗಿ ಗುರುತಿಸಲಾಗದ cytauxzoon felis ಮತ್ತು mycoplasma ಎಂಬ ಅಪರೂಪದ ಕಾಯಿಲೆಯಿಂದ ಹುಲಿ ಬಳಲುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಚಿರತೆಗೆ ಬೇಕಾದ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ವನ್ಯ ಮೃಗಗಳನ್ನು( wild beasts) ಕಾಡುವ ರೋಗಗಳು ಇದಾಗಿವೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಹುಲಿಗೆ PCR test ಸೇರಿ ಹಲವು ಬಗೆಯ ತಪಾಸಣೆ ಮತ್ತು ಚಿಕಿತ್ಸಾ ಕ್ರಮಗಳನ್ನು ಹಲವು ವನ್ಯ ವೈದ್ಯರು ನಡೆಸಿದ್ದರು. ಆದರೆ ಎಲ್ಲ ವೈದ್ಯರು ಕೈಚೆಲ್ಲಿದ್ದ ಪ್ರಕರಣದ ರೋಗ ತಪಾಸಣೆ ನಡೆಸುವಲ್ಲಿ ಶಿವಮೊಗ್ಗ ಮೂಲದ ವನ್ಯಜೀವಿ ವೈದ್ಯ ಡಾ. ಮದನ್ ಕೋಮಪಾಲ ಯಶಸ್ವಿಯಾಗಿದ್ದಾರೆ.

ವಾಂತಿ, ಬೇದಿ, ಸುಸ್ತು, ಆಹಾರ ಸೇವನೆ ತ್ಯಜಿಸಿದ್ದ ಶೌರ್ಯನ ಆರೋಗ್ಯ ಸುಧಾರಿಸಲು ಅರಣ್ಯ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ರಾಜ್ಯದ ಹಲವು ಲ್ಯಾಬ್ ಗಳಲ್ಲಿ ಶೌರ್ಯನಿಗೆ ಬಂದೊದಗಿರುವ ರೋಗದ ಬಗ್ಗೆ ತಪಾಸಣೆ ನಡೆಸಲಾಗಿತ್ತು. ಸದ್ಯ 20 ವರ್ಷದ ಶೌರ್ಯನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ವನ್ಯ ಜೀವಿಗಳನ್ನು ಕಾಡುವ ಈ ರೋಗಗಳನ್ನು 1976ರಲ್ಲೇ ಅಮೆರಿಕದಲ್ಲಿ ಪತ್ತೆ ಮಾಡಿದ್ದರೂ ಅದನ್ನು ನಮ್ಮ ದೇಶದಲ್ಲಿ ಗುರುತಿಸಲಾಗಿರಲಿಲ್ಲ.

ಇನ್ನು ಶೌರ್ಯನ ಆರೋಗ್ಯದಲ್ಲಿ ಚೇತರಿಕೆ ಉಂಟಾಗಿರುವುದು ನಮಗೆಲ್ಲ ಸಂತಸವನ್ನುಂಟು ಮಾಡಿದೆ ಎಂದು ಪ್ರಾಣಿ ಸಂಗ್ರಹಾಲಯ ನಿರ್ದೇಶಕ ಹಾಗೂ ಡಿಸಿಎಫ್ ಹರ್ಷಭಾನು ಹೇಳಿದ್ದಾರೆ. ಅಲ್ಲದೆ ಪ್ರಾಣಿ ಸಂಗ್ರಹಾಲಯದ ವೈದ್ಯ ಡಾ. ನಾಗೇಶ ಹುಲಿಲಗೋಳ, ಪ್ರಾಣಿಪಾಲಕ ಕೆಂಪನ್ನ ವನ್ನೂರ, ಡೆಪ್ಯುಟಿ ರೇಂಜ್ ಫಾರೆಸ್ಟರ್ ಪ್ರತಿಭಾ ಕೊಪ್ಪಳ ಹಾಗೂ ಇತರೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಹುಲಿಗಳ ಸಂತತಿ ಹೆಚ್ಚಳ: ಕರ್ನಾಟಕದ ಆರು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿ ಹೆಚ್ಚಳವಾಗುತ್ತಿದೆ ಎಂದು ಸಿಡಬ್ಲ್ಯೂಎಸ್ (ವನ್ಯಜೀವಿ ಅಧ್ಯಯನ ಕೇಂದ್ರ) ಮಾಹಿತಿ ನೀಡಿದೆ. ಕರ್ನಾಟದಲ್ಲಿರುವ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹುಲಿಗಳ ಸಂತತಿಯಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದೆ. ಉಲ್ಲಾಸ್ ಕಾರಂತ್ ಎಂಬವರು ಈ ಬಗ್ಗೆ ಸಂಶೋಧನೆ ಮಾಡಿದ್ದು, 1986ರಲ್ಲಿ ಈ ಕುರಿತು ವೈಜ್ಞಾನಿಕವಾಗಿ ಸಂಶೋಧನೆಯನ್ನು ಪ್ರಾರಂಭಿಸಿದರು. 1986ಕ್ಕೂ ಮೊದಲು 86 ಹುಲಿಗಳು ಕಂಡು ಬಂದಿದ್ದವು. 1986ರ ನಂತರ ನಿರಂತರ ಸಂಶೋಧನೆಯ ಪ್ರಕಾರ ಇಲ್ಲಿಯವರೆಗೂ 520ಕ್ಕೂ ಹೆಚ್ಚು ಹುಲಿಗಳು ಕಂಡು ಬಂದಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ :ಬನ್ನೇರುಘಟ್ಟ ಮೃಗಾಲಯಕ್ಕೆ ಚೆನ್ನೈ ಮೃಗಾಲಯದಿಂದ ಬಿಳಿ ಹುಲಿ ಸೇರ್ಪಡೆ

ABOUT THE AUTHOR

...view details