ಬೆಳಗಾವಿ:ತಾಲೂಕಿನ ಹಾಲಬಾವಿಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇಂದ್ರಕ್ಕೆ ಲಕ್ಷಣ ರಹಿತ 16 ಜನ ಕೊರೊನಾ ಸೋಂಕಿತ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಲಕ್ಷಣ ರಹಿತ 16 ಕೊರೊನಾ ಸೋಂಕಿತರ ಸ್ಥಳಾಂತರ - Belagavi news
ಕೊರೊನಾ ಸೋಂಕಿನ ಲಕ್ಷಣ ಇರದ ಸೋಂಕಿತರಿಗೆ 80 ಹಾಸಿಗೆಯುಳ್ಳ ಬೆಡ್ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿದೆ.
ಬೆಳಗಾವಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಅಸಿಂಪ್ಟಮೆಟಿಕ್ ಇರುವ ಸೋಂಕಿತರಿಗೆ 80 ಹಾಸಿಗೆಯುಳ್ಳ ಬೆಡ್ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿದೆ. ಆದರೆ 80 ಬೆಡ್ ವ್ಯವಸ್ಥೆ ಮಾಡಿದ್ದರೂ ಕೇವಲ16 ರೋಗಿಗಳನ್ನು ಮಾತ್ರ ಇಲ್ಲಿಯವರೆಗೆ ಶಿಫ್ಟ್ ಮಾಡಲಾಗಿದೆ.
ಇನ್ನು ಬಿಮ್ಸ್ ಆಸ್ಪತ್ರೆಯಲ್ಲಿ ರೋಗದ ಗುಣಲಕ್ಷಣಗಳು ಇಲ್ಲದವರು ಕೋವಿಡ್ ವಾರ್ಡ್‌ನಲ್ಲಿ ನರಳಾಟ ಮಾಡುತ್ತಿದ್ದಾರೆ. ನಮ್ಮಲ್ಲಿ ರೋಗದ ಗುಣಲಕ್ಷಣ ಇಲ್ಲ, ಹೀಗಾಗಿ ಬೇರೆಡೆ ಶಿಫ್ಟ್ ಮಾಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಅಸಿಂಪ್ಟಮೆಟಿಕ್ ರೋಗಿಗಳನ್ನು ಶಿಫ್ಟ್ ಮಾಡದಿದ್ದಕ್ಕೆ ಕೆಲ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
TAGGED:
Belagavi news