ಬೆಳಗಾವಿ:ಕಳೆದ ಮೂರು ದಿನಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿದಿದೆ. ಪರಿಣಾಮ ಮಳೆಗೆ ಕೆಳಹಂತದ ಸೇತುವೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಹೀಗೆ ಜಲಾವೃತವಾದ ಅಪಾಯಕಾರಿ ಸೇತುವೆ ಮೇಲೆಯೇ ಬೈಕ್ ಸವಾರರು, ವಿದ್ಯಾರ್ಥಿನಿಯರು ಕಾಲೇಜಿಗೆ ಕಾಲ್ನಡಿಗೆ ಮೂಲಕ ಹೋಗುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರವಲಯದಲ್ಲಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮುಳುಗಡೆಯಾಗಿದೆ. ಸಂಪೂರ್ಣ ಮುಳುಗಡೆ ಆಗಿರುವ ಸೇತುವೆ ಮೇಲೆ ಬೈಕ್-ಕಾರು ಹಾಗೂ ಪ್ರಯಾಣಿಕರು ಕಾಲ್ನಡಿಗೆ ಮೂಲಕ ಸಂಚರಿಸುತ್ತಿದ್ದಾರೆ. ಇದಲ್ಲದೇ ಮುಳುಗಡೆಯಾದ ಸೇತುವೆ ಮೇಲೆ ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಕಾಲೇಜಿಗೆ ಹೋಗುತ್ತಿದ್ದಾರೆ.